U19 World Cup: 11ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ!

Prasthutha|

ದಕ್ಷಿಣ ಆಫ್ರಿಕಾ: ಭಾರತ ನೇಪಾಳ ವಿರುದ್ಧ 132 ರನ್​ಗಳ ಜಯ ಸಾಧಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ. ಅಂಡರ್ 19 ವಿಶ್ವಕಪ್​ನಲ್ಲಿ‌ ಭಾರತ 11ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದಂತಾಗಿದೆ. ಅಲ್ಲದೆ, ಸತತವಾಗಿ 5ನೇ ಬಾರಿ (2016, 2018, 2020, 2022 ಹಾಗೂ ಪ್ರಸ್ತುತ ವಿಶ್ವಕಪ್) ಭಾರತ ತಂಡ ಕಿರಿಯರ ವಿಶ್ವಕಪ್​ನಲ್ಲಿ ಈ ಸಾಧನೆ ಮಾಡಿದೆ.

- Advertisement -

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 297ರನ್​ ಗಳಿಸಿತ್ತು. ನಾಯಕ ಉದಯ್ ಸಹರಾನ್ 107 ಎಸೆತಗಳಲ್ಲಿ 9 ಬೌಂಡರಿ ಸಹಿತ 100, ಸಚಿನ್ ದಾಸ್​ 101 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 116 ರನ್​ಗಳಿಸಿದರು.

4ನೇ ವಿಕೆಟ್​ಗೆ ಉದಯ್ ಮತ್ತು ಸಚಿನ್ ವಿಶ್ವದಾಖಲೆಯ 215ರನ್​ಗಳ ನೆರವಿನಿಂದ ಭಾರತ ತಂಡ 297ರನ್​ ದಾಖಲಿಸಿತು. ನೇಪಾಳ ಪರ ಗುಲ್ಸನ್ ಝಾ 56ರನ್​ ನೀಡಿ 3 ವಿಕೆಟ್ ಪಡೆದರು.

- Advertisement -

ಇನ್ನೂ 298ರನ್​ಗಳ ಬಲಿಷ್ಠ ಗುರಿಯನ್ನು ನೀಡಿದ್ದ ಭಾರತ ತಂಡ ನೇಪಾಳವನ್ನು ಕೇವಲ 165ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿ 132ರನ್​ಗಳ ಬೃಹತ್ ಜಯ ಸಾಧಿಸಿತು. ಭಾರತದ ಪರ ಸೌಮಿ ಪಾಂಡೆ 29ಕ್ಕೆ 4, ಅರ್ಶಿನ್ ಕುಲಕರ್ಣಿ 18ಕ್ಕೆ 2, ರಾಜ್​ ಲಿಂಬಾನಿ, ಆರಾಧ್ಯ ಶುಕ್ಲಾ, ಮುರುಗನ್ ಅಭಿಷೇಕ್ ತಲಾ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ನೇಪಾಳ ಪರ ನಾಯಕ ದೇವ್​ ಖನಾಲ್ 33, ಅರ್ಜುನ್ ಕುಮಾಲ್ 26, ದೀಪಕ್ ಬೊಹಾರ 22 ದುರ್ಗೇಶ್ ಗುಪ್ತಾ 29ರನ್​ಗಳಿಸಿದರು.




Join Whatsapp