ಗಡಿ ವಿವಾದ| ಅಸ್ಸಾಮ್ ಮುಖ್ಯಮಂತ್ರಿ ವಿರುದ್ಧ ಮಿಝೋರಾಮ್ ಪೊಲೀಸರಿಂದ ಪ್ರಕರಣ ದಾಖಲು

Prasthutha|

ಗುವಾಹಟಿ ಜುಲೈ31: ಅಸ್ಸಾಮ್–ಮಿಝೋರಾಮ್ ಗಡಿ ಯಲ್ಲಿ ಜುಲೈ 26 ರಿಂದ ನಡೆಯುತ್ತಿರುವ ಘರ್ಷಣೆಯ ನಿಟ್ಟಿನಲ್ಲಿ ಮಿಝೋರಾಮ್ ಪೊಲೀಸರು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಕೊಲೆಯತ್ನ ಮತ್ತು ಕ್ರಿಮಿನಲ್ ಪಿತೂರಿ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

ಇದರೊಂದಿಗೆ ಮಿಝೋರಾಮ್ ಪೊಲೀಸರು ಸಲ್ಲಿಸಿರುವ ಎಫ್.ಐ.ಆರ್ ನಲ್ಲಿ ಅಸ್ಸಾಮ್ ನ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿ, ಇಬ್ಬರು ಸಾಮಾನ್ಯ ಅಧಿಕಾರಿ ಮತ್ತು 200 ಕ್ಕೂ ಮಿಕ್ಕಿದ ಅನಾಮಧೇಯ ಅಸ್ಸಾಮ್ ಪೊಲೀಸ್ ಸಿಬ್ಬಂದಿಗಳ ಹೆಸರನ್ನು ಸೇರಿಸಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ), ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಿಜೋರಾಮ್ ಕಂಟೈನ್‌ಮೆಂಟ್ ಮತ್ತು ಕೋವಿಡ್ -19 2020 ರ ಕಾಯ್ದೆಯ ವಿವಿಧ ಸೆಕ್ಷಣ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

ಸರಿಸುಮಾರು 200 ಕ್ಕೂ ಮಿಕ್ಕಿದ ಶಸ್ತ್ರ ಸಜ್ಜಿತ ಅಸ್ಸಾಮ್ ಪೊಲೀಸರು ಮೀಸಲು ಅರಣ್ಯದ ಪ್ರದೇಶ ಅತಿಕ್ರಮದ ಆರೋಪ ಹೊರಿಸಿ ನಮ್ಮ ಶಿರದ ಮೇಲೆ ಬಲವಂತದಿಂದ ಆಕ್ರಮಿಸಿಕೊಳ್ಳಲಾಗಿದೆಯೆಂದು ಮಿಝೋರಾಮ್ ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Join Whatsapp