ನಟಿ ಜೊತೆ ಅನುಚಿತ ವರ್ತನೆ| ಕಾನೂನು ಕಾಲೇಜ್​ನಿಂದ ವಿದ್ಯಾರ್ಥಿ ಅಮಾನತು

Prasthutha|

ಎರ್ನಾಕುಲಂ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿಯೊಬ್ಬನನ್ನು ಎರ್ನಾಕುಲಂ ಕಾನೂನು ಕಾಲೇಜು ಅಮಾನತುಗೊಳಿಸಿದೆ.

- Advertisement -

ವೇದಿಕೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನೊಂದಿಗೆ ನಡೆದುಕೊಂಡ ರೀತಿಗೆ ಸ್ವತಃ ನಟಿಯೇ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದರು.

ಸಮಾರಂಭದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ವೇದಿಕೆಯ ಮೇಲಿದ್ದ ನಟಿಯ ಬಳಿಗೆ ತೆರಳಿದ್ದಾನೆ. ಬಳಿಕ ನಟಿಯನ್ನು ಎದ್ದು ನಿಲ್ಲುವಂತೆ ಮನವಿ ಮಾಡಿದ್ದಾನೆ. ಈ ವೇಳೆ, ಎದ್ದು ನಿಂತ ನಟಿಯ ಭುಜದ ಮೇಲೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದ್ದಾನೆ. ಇದರಿಂದ ನಟಿ ದೂರ ಸರಿದ್ದಿದ್ದರು. ಬಳಿಕ ಆ ವಿದ್ಯಾರ್ಥಿನಿಯನ್ನು ಅಮಾನತು ಮಾಡಲಾಗಿದೆ.

Join Whatsapp