ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸಿಲ್ಲವೆಂದು ಅಲ್ಪಸಂಖ್ಯಾತರ ಅಂಗಡಿಗಳಿಗೆ ಬೆಂಕಿಯಿಟ್ಟರು!

Prasthutha|

ಪಂಚಾಯತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯ ಪರವಾಗಿ ಮತಚಲಾಯಿಸಿಲ್ಲ ಎಂಬ ಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರ ಅಂಗಡಿಗಳಿಗೆ ಬೆಂಕಿಯಿಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಸಂಬಂಧ ಧೋಲ್ಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

- Advertisement -

ಅ.6ರಂದು ಜಿಲ್ಲೆಯ ಸೆಪೌ ಪಟ್ಟಣದಲ್ಲಿ ಘಟನೆ ನಡೆದಿದೆ.

ಸೆಪೌ ಸರಪಂಚ್ ಸೀಟಿಗಾಗಿ ನಡೆದ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಜಿತೇಂದ್ರ ಪರವಾಗಿ ಅಂಗಡಿಯ ಮಾಲಕರು ಮತ ಚಲಾಯಿಸದ್ದಕ್ಕಾಗಿ ಗಲಭೆ ಆರಂಭವಾಗಿತ್ತು ಎಂದು ಎಫ್.ಐ.ಆರ್ ನಲ್ಲಿ ತಿಳಿಸಲಾಗಿದೆ.

- Advertisement -

ಘಟನೆಯನ್ನು ಜಿತೇಂದ್ರ ಖಂಡಿಸಿದ್ದು ಅಪರಾಧಿಗಳನ್ನು ಶಿಕ್ಷಿಸುವಂತೆ ಹೇಳಿದ್ದಾರೆ. ಘಟನೆಯ ಐವರು ಆರೋಪಿಗಳಲ್ಲಿ ಜಿತೇಂದ್ರರ ಸಹೋದರ ನರದ್ ಮತ್ತು ಹರೇಂದ್ರ ಆರೋಪಿಗಳಾಗಿದ್ದಾರೆ.

10-12 ಅಂಗಡಿಗಳ ಮಾಲೀಕರು ತಮ್ಮ ಜೀವನ ಮೂಲಗಳನ್ನು ನಾಶಗೊಳಿಸಲಾಗಿದೆ ಎಂದು ದೂರು ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇಸರ್ ಸಿಂಗ್ ಶೇಖವತ್ ಹೇಳಿದ್ದಾರೆ.

“ಘಟನಾ ಸ್ಥಳದಲ್ಲಿ ಎರಡು ಸ್ಫೋಟಿತ ಸಿಲಿಂಡರ್ ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇದು ಅಪಘಾತವೇ ಅಥವಾ ಅಗ್ನಿಸ್ಪರ್ಶದ ಪ್ರಕರಣವೇ ಎಂದು ದೃಢಪಡಿಸಲು ವಿಧಿವಿಜ್ನಾನ ಪ್ರಯೋಗಾಲಯವು ಸ್ಥಳವನ್ನು ಪರಿಶೀಲಿಸಿದೆ” ಎಂದು ಎಸ್ಪಿ ತಿಳಿಸಿದ್ದಾರೆ. ಘಟನೆಯ ಬಳಿಕ ನರೇಂದ್ರ ಮತ್ತು ರಬ್ಬರನ್ನು ಬಂಧಿಸಲಾಗಿದೆ.

ನಿಮ್ಮ ಸಮುದಾಯವು ನಮ್ಮ ಪರವಾಗಿ ಮತಚಲಾಯಿಸದಿದ್ದರೆ ಅಂಗಡಿಗಳನ್ನು ಸುಡಲಾಗುವುದು ಎಂದು ಐದು ಮಂದಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. “ತನ್ನ ಅಂಗಡಿಗೆ ಬೆಂಕಿ ಹಾಕಲಿರುವುದರಿಂದ ಸರಕನ್ನು ಖಾಲಿ ಮಾಡುವಂತೆ ಅಕ್ಟೋಬರ್ 5 ರಂದು ನರದ್ ಅಂಗಡಿ ಮಾಲೀಕರಲ್ಲೊಬ್ಬ ಅಲೀಮುದ್ದೀನ್ ಗೆ ಬೆದರಿಕೆ ಹಾಕಿದ್ದ. ರಾತ್ರಿ 1 ಗಂಟೆಯ ವೇಳೆ ನರದ್, ರಬ್ಬ, ಚೋಟು, ಹರೇಂದ್ರ ಮತ್ತು ನಾರಾಯಣ್ ಸಿಂಗ್ ಅಂಗಡಿಗಳಿಗೆ ಬೆಂಕಿ ಹಾಕಿದರು. ನಾವು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ” ಎಂಬುದಾಗಿ ಸಂತ್ರಸ್ತರ ದೂರಿನಲ್ಲಿ ಉಲ್ಲೇಖ್ಹಿಸಲಾಗಿದೆ.

Join Whatsapp