ಧೂಳು ನಿಯಂತ್ರಣ ನಿಯಮ ಉಲ್ಲಂಘನೆ: ವಾಣಿಜ್ಯ ಮಂಡಳಿಗೆ 20 ಲಕ್ಷ ದಂಡ ವಿಧಿಸಿದ ದಿಲ್ಲಿ ಸರಕಾರ

Prasthutha|

ಹೊಸದಿಲ್ಲಿ: ಧ್ವಂಸ ಸ್ಥಳದಲ್ಲಿ ಧೂಳು ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಿಲ್ಲಿ ಸರಕಾರವು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ (ಎಫ್.ಐ.ಸಿ.ಸಿ.ಐ) ವಿರುದ್ಧ 20 ಲಕ್ಷ ರೂಪಾಯಿ ದಂಡ ವಿಧಿಸಿದೆ.

- Advertisement -

15 ದಿನಗಳೊಳಗಾಗಿ ಪರಿಸರ ಪರಿಹಾರವನ್ನು ಠೇವಣಿ ಮಾಡಬೇಕೆಂದು ವಾಣಿಜ್ಯ ಒಕ್ಕೂಟಕ್ಕೆ ದಿಲ್ಲಿ ಸರಕಾರ ಆದೇಶಿಸಿದೆ.

ಕಾಮಗಾರಿ ಸ್ಥಳಗಳಲ್ಲಿ ಹೊಗೆ ನಿಗ್ರಹ ಬಂದೂಕನ್ನು ಅಳವಡಿಸದೆ ಯಾವುದೇ ಧ್ವಂಸ ಚಟುವಟಿಕೆಗಳನ್ನು ಆರಂಭಿಸದಂತೆ ನಿರ್ದೇಶನಗಳನ್ನು ನೀಡಲಾಗಿದೆ.

- Advertisement -

ಧ್ವಂಸ ಸ್ಥಳದಲ್ಲಿ ಕೆಲಸವನ್ನು ನಿಲ್ಲಿಸುವಂತೆ ಈ ಹಿಂದೆ ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಎಫ್.ಐ.ಸಿ.ಸಿ.ಐಗೆ ಹೇಳಿತ್ತು.

Join Whatsapp