ಮಲ್ಲೂರು : ಗುಡ್ಡ ಕುಸಿತಕ್ಕೆ 3 ವರ್ಷ ತುಂಬಿದ ದಿನದಂದೇ ಮತ್ತೊಮ್ಮೆ ಕುಸಿದ ಗುಡ್ಡ

Prasthutha|

- Advertisement -

ಮನೆಮಂದಿ ಅಪಾಯದಿಂದ ಪಾರು

ಮಂಗಳೂರು : ಮಳೆಯಿಂದಾಗಿ ತಾಲೂಕಿನ ಮಲ್ಲೂರು ಅಂಚೆ ಕಚೇರಿ ಬಳಿ ಗುಡ್ಡ ಕುಸಿದಿದ್ದು ಮನೆಯೊಂದಕ್ಕೆ ಹಾನಿಯಾಗಿದೆ. ಗುಡ್ಡ ಕುಸಿದ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

- Advertisement -

2021ರ ಜುಲೈ 26ರಂದು ಇದೇ ಗುಡ್ಡ ಕುಸಿದು ಮನೆಗೆ ಭಾಗಷಃ ಹಾನಿಯಾಗಿತ್ತು. ಮನೆಮಂದಿ ಗಾಯಗೊಂಡಿದ್ದರು. ಆ ಘಟನೆ ನಡೆದು ಇಂದಿಗೆ 3 ವರ್ಷ ತುಂಬಿದ್ದು, ಅದೇ ದಿನದಂದು ಮತ್ತೊಮ್ಮೆ ಗುಡ್ಡ ಕುಸಿದಿರುವುದು ಮನೆಮಂದಿಯನ್ನು ಆತಂಕಕ್ಕೀಡು ಮಾಡಿದೆ.

ಘಟನಾ ಸ್ಥಳಕ್ಕೆ ಮಲ್ಲೂರು ಪಂಚಾಯತ್ ಉಪಾಧ್ಯಕ್ಷರಾದ ಇಲ್ಯಾಸ್ ಪಾದೆ ಭೇಟಿ ನೀಡಿ ಪರಿಶೀಲಿಸಿದರು. ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಎಸ್.ಡಿ.ಪಿ.ಐ ಮಲ್ಲೂರು ಗ್ರಾಮ ಸಮಿತಿ ಅಧ್ಯಕ್ಷ ಶಫೀಕ್ ಮಲ್ಲೂರು, ಎಸ್ ಡಿ ಪಿ ಐ ಮಲ್ಲೂರು ವಾರ್ಡ್ ಅಧ್ಯಕ್ಷ ಜಬ್ಬಾರ್ ಕಿನ್ನಿಮೇರ್ ಉಪಸ್ಥಿತರಿದ್ದರು.



Join Whatsapp