‘ಇಸ್ರೇಲ್ ಜನಾಂಗೀಯ ರಾಷ್ಟ್ರ’: ನೆಲ್ಸನ್ ಮಂಡೇಲಾ ಮೊಮ್ಮಗ

Prasthutha|

►ಇಸ್ರೇಲ್‌ನಲ್ಲಿ ನಡೆಯುವ ವಿಶ್ವ ಸುಂದರಿ ಸ್ಪರ್ಧೆಯನ್ನು ಬಹಿಷ್ಕರಿಸುವಂತೆ ಕರೆ

- Advertisement -

ಕೇಪ್ ಟೌನ್: ಡಿಸೆಂಬರ್‌ನಲ್ಲಿ ಇಸ್ರೇಲ್‌ನಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯನ್ನು ಬಹಿಷ್ಕರಿಸುವಂತೆ ನೆಲ್ಸನ್ ಮಂಡೇಲಾ ಅವರ ಮೊಮ್ಮಗ ಮತ್ತು ದಕ್ಷಿಣ ಆಫ್ರಿಕಾದ ನ್ಯಾಷನಲ್ ಅಸೆಂಬ್ಲಿ ಸದಸ್ಯ ಮಂಡಲ್ ಮಂಡೇಲಾ ಕರೆ ನೀಡಿದ್ದಾರೆ.

ಫೆಲೆಸ್ತೀನಿಯರ ಮೇಲೆ ಆಕ್ರಮಣ ಮಾಡುವ ಇಸ್ರೇಲಿನ ತಾರತಮ್ಯದ ನೀತಿಗಳನ್ನು ಖಂಡಿಸಿದ ಅವರು ವಿಶ್ವ ಸುಂದರಿ ಸ್ಪರ್ಧೆಯನ್ನು ಬಹಿಷ್ಕರಿಸಲು ಇನ್‌ಸ್ಟಾಗ್ರಾಮ್‌ ನಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.

- Advertisement -


ಫೆಲೆಸ್ತೀನಿನ ಇಸ್ರೇಲ್ ಆಕ್ರಮಣವು ದಕ್ಷಿಣ ಆಫ್ರಿಕಾದಲ್ಲಿ ಚಾಲ್ತಿಯಲ್ಲಿದ್ದ ವರ್ಣಭೇದ ನೀತಿಯನ್ನು ಹೋಲುತ್ತದೆ ಎಂದು ಅವರು ಹೇಳಿದ್ದಾರೆ.


ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿ ವಿರುದ್ಧ ನಿಲ್ಲುವಂತೆ ಈ ಹಿಂದೆ ನೀಡಿದ ಕರೆಗೆ ಜಗತ್ತು ಒಗ್ಗಟ್ಟಾಗಿತ್ತು. ಈಗ ತಾನು ಇಸ್ರೇಲ್ ಆಕ್ರಮಣದ ವಿರುದ್ಧ ನಿಲ್ಲಲು ಕರೆ ನೀಡುತ್ತಿದ್ದೇನೆಂದು ಹೇಳಿದ್ದಾರೆ.

Join Whatsapp