ಕೇಂದ್ರ ಸರ್ಕಾರ ನೂತನ ಕೃಷಿ ನೀತಿಯನ್ನು ಪುನರ್ ಪರಿಶೀಲಿಸಬೇಕು: ಸಂಸದ ವರುಣ್ ಗಾಂಧಿ ಪುನರುಚ್ಚಾರ

Prasthutha|

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ನೀತಿಗಳನ್ನು ಪುನರ್ ಪರಿಶೀಲಿಸಬೇಕು ಎಂದು ಸಂಸದ ವರುಣ್ ಗಾಂಧಿ ತಿಳಿಸಿದ್ದಾರೆ.

- Advertisement -

ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಚಳುವಳಿ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಹೇಳಿಕೆ ಮತ್ತು ಲಖಿಂಪುರ ಹಿಂಸಾಚಾರದ ಬಲಿಯಾದವರಿಗೆ ನ್ಯಾಯಕ್ಕಾಗಿ ಆಗ್ರಹಿಸಿದ ಹಿನ್ನೆಲೆಯಲ್ಲಿ ಸಂಸದ ವರುಣ್ ಗಾಂಧಿ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಕೈಬಿಡಲಾಗಿತ್ತು.

ಈ ಮಧ್ಯೆ ಐದಿನೈದು ದಿನಗಳಿಂದ ಮಾರಾಟವಾಗದೇ ಬಾಕಿ ಉಳಿದಿರುವ ಭತ್ತದ ಬೆಳೆಯನ್ನು ಸುಡಲು ರೈತರು ಮುಂದಾದ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಲಗತ್ತಿಸಿದ ಉತ್ತರಪ್ರದೇಶದ ಪಿಲಿಭಿತ್ ಲೋಕಸಭಾ ಸಂಸದ ವರುಣ್ ಗಾಂಧಿ ಈ ಮೇಲಿನಂತೆ ಒತ್ತಾಯಿಸಿದ್ದಾರೆ.

- Advertisement -

ಉತ್ತರ ಪ್ರದೇಶದ ರೈತರು ಮಂಡಿಯಲ್ಲಿ ಹದಿನೈದು ದಿನಗಳ ಕಾಲ ತನ್ನ ಬೆಳೆಯನ್ನು ಮಾರಲು ಸಾಧ್ಯವಾಗದೆ ಹತಾಶರಾಗಿ ಸೀಮೆ ಎಣ್ಣೆ ಹಾಕಿ ಸುಡುತ್ತಿರುವ ವೀಡಿಯೋವನ್ನು ವರುಣ್ ಹಂಚಿಕೊಂಡಿದ್ದಾರೆ.

ಅನ್ನದಾತರ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ನೀತಿಯನ್ನು ಮರು ಪರಿಶೀಲಿಸಬೇಕಾಗಿದೆ ಎಂದು ವರುಣ್ ಗಾಂಧಿ ಒತ್ತಾಯಿಸಿದ್ದಾರೆ.

ಕಳೆದ ವಾರ ವರುಣ್ ಗಾಂಧಿ ಮತ್ತೊಂದು ವೀಡಿಯೋವನ್ನು ಟ್ವೀಟ್ ಮೂಲಕ ಹಂಚಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ರೈತರನ್ನು ಬೆದರಿಸುವ ವಿರುದ್ಧ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. 1980 ರದ್ದು ಎಂದು ಹೇಳಲಾದ ವೀಡಿಯೋ ವಾಜಪೇಯಿ ಅವರು ರೈತರ ಮೇಲೆ ದಬ್ಬಾಳಿಕೆ ನಡೆಸದಂತೆ ಅಂದಿನ ಇಂದಿರಾಗಾಂಧಿ ಸರ್ಕಾರವನ್ನು ಎಚ್ಚರಿಸಿದ್ದರು.

Join Whatsapp