ಪ್ರಸಕ್ತ ಭಾರತದ ಸವಾಲುಗಳನ್ನು ಎದುರಿಸಲು ಪ್ರವಾದಿ ಜೀವನ ಪಾಠವಾಗಲಿ: IFF ನಾಯಕ ಇಮ್ರಾನ್ ಫಕಿ

Prasthutha|

ದಮ್ಮಾಮ್ : ಅಂಬೇಡ್ಕರ್ ಬರೆದ ಸಂವಿಧಾನ ಭಾರತದಲ್ಲಿ ನಮಗೆ ಜೀವಿಸುವ, ನಮಗಿಷ್ಟ ಬಂದ ಮತವನ್ನು ಅನುಸರಿಸುವ ಮತ್ತು ಪ್ರಚುರಪಡಿಸುವ ಹಕ್ಕನ್ನು ನೀಡುತ್ತದೆ. ನಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಕಾಶವನ್ನೂ ಅದು ನೀಡುತ್ತದೆ. ನಮ್ಮ ಹಕ್ಕುಗಳಿಗಾಗಿ ಹೋರಾಡಲು ಹೊರಗಿನಿಂದ ಯಾರೂ ಬರಲಾರರು. ನಮ್ಮ ಹಕ್ಕುಗಳಿಗಾಗಿ ನಾವೇ ಬೀದಿಗಿಳಿದು ಹೋರಾಡಬೇಕಾಗಿದೆ” ಎಂದು ಇಂಡಿಯಾ ಫ್ರೆಟರ್ನಿಟಿ ಫೋರಂ ನಾಯಕ ಇಮ್ರಾನ್ ಫಕಿ ಹೇಳಿದ್ದಾರೆ.

- Advertisement -


ಅವರು ಇಲ್ಲಿನ ಗಲ್ಫ್ ದರ್ಬಾರ್ ರೆಸ್ಟೋರೆಂಟ್ ಸಂಭಾಂಗಣದಲ್ಲಿ ಐ.ಎಫ್.ಎಫ್ ಉತ್ತರ ಕರ್ನಾಟಕ ಘಟಕ ನಡೆಸಿದ ” ಸೀರತ್ ಇ ರಹ್ಮತುಲ್ ಆಲಮೀನ್” ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
“ಕೆಡುಕನ್ನು ಕೈಯ್ಯಲ್ಲಿ ತಡೆಯುವುದು ಈಮಾನಿನ ಮೊದಲ ಭಾಗ. ಅದು ಸಾಧ್ಯವಾಗದಿದ್ದರೆ ಮಾತುಗಳ ಮೂಲಕ ತಡೆಯುವುದು ಎರಡನೆ ಭಾಗ. ಮನಸ್ಸಿನ ಮೂಲಕವಾದರೂ ಕೆಡುಕನ್ನು ಕಂಡು ಅಸಹ್ಯ ಪಡುವುದು ಈಮಾನ್ ನ ಕೊನೆಯ ಭಾಗವಾಗಿದೆ. ನಾವು ಈಮಾನ್ ನ ಮೊದಲ ಸ್ಥಾನವನ್ನು ಹೊಂದಬೇಕಾಗಿದೆ. ಭಾರತದಲ್ಲಿ ಫ್ಯಾಶಿಸಂ ಉತ್ತುಂಗದಲ್ಲಿರುವಾಗ ಇದು ಅಗತ್ಯವಾಗಿದೆ” ಎಂದು ಅವರು ಹೇಳಿದರು.


“ಅಸ್ಸಾಂನಲ್ಲಿ ಮುಸ್ಲಿಮ್ ವ್ಯಕ್ತಿಯ ಹೆಣದ ಮೇಲೆ ಪೊಲೀಸ್ ಛಾಯಾಗ್ರಾಹಕ ವಿಕೃತವಾಗಿ ಕುಣಿಯುವ ಚಿತ್ರಣ ಭಾರತೀಯ ಮುಸ್ಲಿಮರ ಇಂದಿನ ನೈಜ ಪರಿಸ್ಥಿತಿಯಾಗಿದೆ. ಭಾರತದಲ್ಲಿ ಫ್ಯಾಶಿಸಂ ಉತ್ತುಂಗದಲ್ಲಿದೆ. ಅನ್ಯಾಯದ ವಿರುದ್ಧ ಹೋರಾಡಬೇಕಾಗಿದೆ. ಯಾರಾದರೂ ಭಾರತದ ಇಂದಿನ ಸ್ಥಿತಿಯ ಕುರಿತು ಭಯಪಡಿಸುವ ಮಾತುಗಳನ್ನಾಡಿದರೆ ಅದಕ್ಕೆ ನಾವು ಎದೆಗುಂದಬಾರದು. ಪ್ರಜಾಪ್ರಭುತ್ವ ಮಾದರಿಯಲ್ಲಿ ಅದನ್ನು ನಾವು ಎದುರಿಸಬೇಕು ಎಂದು ಹೇಳಿದರು.

- Advertisement -


ಐ.ಎಫ್.ಎಫ್ ಜಿಲ್ಲಾ ಸಾರ್ವಜನಿಕ ಸಂಪರ್ಕ ವಿಭಾಗದ ನಾಯಕ ಮುಹಮ್ಮದ್ ಶರೀಫ್ ಜೋಕಟ್ಟೆ ಮಾತನಾಡಿ “ಸಿ.ಎ.ಎ -ಎನ್.ಆರ್.ಸಿ ವಿರುದ್ಧ ಪ್ರತಿಭಟಿಸಿದ ಉಮರ್ ಖಾಲಿದ್ ಮತ್ತು ಇತರ ನಾಯಕರನ್ನು ದಿಲ್ಲಿ ಗಲಭೆಯ ಸುಳ್ಳು ಆರೋಪ ಹೊರಿಸಿ ಯುಎಪಿಎ ಯಂತಹ ಪ್ರಕರಣದಡಿ ಬಂಧಿಸಲಾಗಿದೆ. ಎಲ್ಲಾ ರೀತಿಯಲ್ಲೂ ಮುಸ್ಲಿಮರನ್ನು ಗುರಿಪಡಿಸಲಾಗುತ್ತಿದೆ. ಫ್ಯಾಶಿಸ್ಟರಿಂದ ಎಲ್ಲಾ ಕಡೆಗಳಿಂದಲೂ ಸುತ್ತುವರಿಯಲ್ಪಟ್ಟ ಇಂದಿನ ಪರಿಸ್ಥಿತಿಯಲ್ಲಿ ಭಾರತೀಯ ಮುಸ್ಲಿಮರು ಒಂದಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.


ನಜಮ್ ಬೆಂಗಳೂರು ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಐ.ಎಫ್.ಎಫ್ ಜಿಲ್ಲಾ ಕಾರ್ಯದರ್ಶಿ ನಿಶಾಫ್ ಅಹ್ಮದ್ ಮೆಲ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಐ.ಎಫ್.ಎಫ್ ಉತ್ತರ ಕರ್ನಾಟಕ ಘಟಕದ ಕಾರ್ಯದರ್ಶಿ ಫರಾಝ್ ಅಹ್ಮದ್, ಐ.ಎಸ್.ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಮೀರಾಜ್ ಗುಲ್ಬರ್ಗಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಾರೂಕ್ ಕಾರ್ಕಳ ಸ್ವಾಗತಿಸಿ, ಅಯ್ಯೂಬ್ ವಂದಿಸಿದರು. ಸಿಬ್ಗತ್ ಕೋಲಾರ ಕಾರ್ಯಕ್ರಮ ನಿರೂಪಿಸಿದರು

Join Whatsapp