ಮಾಸ್ಕ್ ವಿರೋಧಿ​ ರ‍್ಯಾಲಿ ನಡೆಸಿದ್ದ ವ್ಯಕ್ತಿ ಕೋವಿಡ್​ ಗೆ ಬಲಿ!

Prasthutha|

ಟೆಕ್ಸಾಸ್:​ ಸೋಂಕು ನಿಯಂತ್ರಣಕ್ಕಾಗಿ ಮಾಸ್ಕ್​ ಧರಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿ ರ‍್ಯಾಲಿ ನಡೆಸಿದ್ದ ವ್ಯಕ್ತಿ ಕೋವಿಡ್​ ಸೋಂಕಿಗೇ ಬಲಿಯಾದ ಘಟನೆ ಟೆಕ್ಸಾಸ್​ನಲ್ಲಿ ನಡೆದಿದೆ.

ಸೋಂಕಿಗೆ ಬಲಿಯಾದ ವ್ಯಕ್ತಿಯನ್ನು ಕ್ಯಾಲೆಬ್​​ ವಾಲೇಸ್ ಎಂದು ಗುರುತಿಸಲಾಗಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರು ಸುಮಾರು 1ತಿಂಗಳುಗಳ ಕಾಲ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು ಎನ್ನಲಾಗಿದೆ.

- Advertisement -

2020ರ ಜುಲೈ 4ರಂದು ಸ್ಯಾನ್​ ಎಂಜೇಲೋದಲ್ಲಿ ಮಾಸ್ಕ್​ ಧರಿಸುವುದು ಸೇರಿದಂತೆ ವಿವಿಧ ಕೊರೊನಾ ಸಂಬಂಧಿ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿ ನಡೆಸಿದ ‘ದಿ ಫ್ರೀಡಂ’ ರ‍್ಯಾಲಿಗೆ ಕ್ಯಾಲೆಬ್​ ನೇತೃತ್ವ ನೀಡಿದ್ದರು.

- Advertisement -