ಮಧ್ಯಪ್ರದೇಶದಲ್ಲಿ ಮುಂದುವರೆದ ಹಿಂದುತ್ವ ಸಂಘಟನೆಗಳ ಗುಂಪು ಹಿಂಸೆ| ಕಳ್ಳತನ ಆರೋಪದಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Prasthutha|

ಭೋಪಾಲ್: ಮಧ್ಯಪ್ರದೇಶದಲ್ಲಿ ಆದಿವಾಸಿ ಯುವಕನನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಲಾರಿಗೆ ಕಟ್ಟಿ ಎಳೆದೊಯ್ದು ಕೊಲೆ ಮಾಡಿದ ನಂತರ ಇದೀಗ ಮತ್ತೊಂದು ದಾರುಣ ಘಟನೆ ವರದಿಯಾಗಿದೆ. ಬಸ್ ಬ್ಯಾಟರಿಯನ್ನು ಕದ್ದಿದ್ದಾನೆಂದು ಆರೋಪಿಸಿ ಮುಸ್ಲಿಂ ಯುವಕನೊಬ್ಬನನ್ನು ಹಿಂದುತ್ವ ಗುಂಪೊಂದು ಕ್ರೂರವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಸಂತ್ರಸ್ತ ಯುವಕನನ್ನು ಮೊಹಮ್ಮದ್ ಅಸದ್ ಖಾನ್ ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲಾಗಿದೆ. ಅಸ್ಸಾದ್ ಗೆ ಬೆಲ್ಟ್ ನಿಂದ ಥಳಿಸುವುದು, ಒದೆಯುವುದು ವೀಡಿಯೋದಲ್ಲಿ ಕಾಣಬಹುದು. ಘಟನೆಗೆ ಸಂಬಂಧಿಸಿದಂತೆ ಡ್ಯಾನಿಶ್ ಮತ್ತು ಕುಲದೀಪ್ ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ಆರೋಪಿಗಳಿಗೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

ವೀಡಿಯೋ ವೀಕ್ಷಿಸಿ…

- Advertisement -

ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಇತ್ತೀಚೆಗೆ ಆದಿವಾಸಿ ಯುವಕನನ್ನು ಲಾರಿಯ ಹಿಂಭಾಗಕ್ಕೆ ಕಟ್ಟಿಹಾಕಿ ಹಿಂದುತ್ವ ಗುಂಪೊಂದು ಹತ್ಯೆಗೈದಿತ್ತು. ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಯುವಕನನ್ನು ಕ್ರೂರವಾಗಿ ಥಳಿಸಿದ ನಂತರ ಲಾರಿ ಹಿಂದೆ ಕಟ್ಟಿ ಎಳೆದೊಯ್ಯಲಾಗಿತ್ತು.

Join Whatsapp