ಮಹಾರಾಷ್ಟ್ರದಲ್ಲಿ ಮಾಸ್ಕ್ ಕಡ್ಡಾಯಗೊಳಿಸದಿರಲು ರಾಜ್ಯ ಸರ್ಕಾರ ನಿರ್ಧಾರ

Prasthutha|

ಮುಂಬೈ: ಏಪ್ರಿಲ್ 1 ರಿಂದ ಮುಂಬೈ ಮತ್ತು ಮಹಾರಾಷ್ಟ್ರದ ಉಳಿದ ಭಾಗಗಳಲ್ಲಿ ಮಾಸ್ಕ್ ಹಾಕುವುದನ್ನು   ಕಡ್ಡಾಯಗೊಳಿಸದಿರಲು  ರಾಜ್ಯ ಸರ್ಕಾರ ನಿರ್ಧರಿಸಿದೆ.

- Advertisement -

ಮಂಗಳವಾರ ನಡೆದ ಕೋವಿಡ್ -19 ನಿರ್ವಹಣೆಯ ರಾಜ್ಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸದಿರಲು ಮತ್ತು ಅದೇ ಸಮಯದಲ್ಲಿ, ಕೋವಿಡ್  ಒಳಗೊಂಡಿರುವ ಮುನ್ನೆಚ್ಚರಿಕೆಗಳನ್ನು ಗಮನಿಸಲು  ಮತ್ತು ಮುಂದುವರಿಸಲು ನಾಗರಿಕರಿಗೆ ಮನವಿ ಮಾಡುತ್ತದೆ ಎಂದು ತೀರ್ಮಾನಿಸಿದೆ.

ಹಲವು ವಾರಗಳಿಂದ ಮಹಾರಾಷ್ಟ್ರದಲ್ಲಿ ಕಡಿಮೆ ಕೋವಿಡ್ ಪ್ರಕರಣಗಳು ಮತ್ತು ಸಾವುಗಳು ವರದಿಯಾಗುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Join Whatsapp