ಮಧ್ಯಪ್ರದೇಶ: ಮುಸ್ಲಿಮರನ್ನು ಕ್ರಿಕೆಟ್ ಟೂರ್ನಿಯಿಂದ ಹೊರಗಿಟ್ಟ ಬಿಜೆಪಿ ಶಾಸಕ

Prasthutha|

ಭೋಪಾಲ್: ಬಿಜೆಪಿ ಶಾಸಕರೊಬ್ಬರು ಮುಸ್ಲಿಮರು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಸ್ಲಿಮ್ ಆಟಗಾರರು ಪಾಲ್ಗೊಳ್ಳುವುದನ್ನು ಬಿಜೆಪಿ ಶಾಸಕ ದೇವೇಂದ್ರ ವರ್ಮಾ ನಿಷೇಧಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಕೆಲ ಆಟಗಾರರು ಧರ್ಮದ ಹೆಸರಿನಲ್ಲಿ ಬಹಿಷ್ಕಾರ ಹಾಕಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

ಎಪ್ರಿಲ್ 20ರಂದು ಪಂದ್ಯಾವಳಿ ಆರಂಭಗೊಂಡಿದ್ದು, ಶಾಸಕರ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯ ಸಂಘಟಕರು ಮುಸ್ಲಿಂ ಆಟಗಾರರಿರುವ ತಂಡವನ್ನು ಅವರಿಲ್ಲದೆ ಆಡಲು ಹೇಳಿದರು. ಈ ಕಾರಣಕ್ಕಾಗಿಯೇ 32 ತಂಡಗಳ ಟೂರ್ನಿಯಿಂದ ಹಲವು ಆಟಗಾರರು ಹೊರಗುಳಿದರು.

ನಾನು ಯಾವುದೇ ಧರ್ಮದ ವಿರೋಧಿಯಲ್ಲ. ನಾಲ್ಕು ವರ್ಷಗಳ ಹಿಂದೆ ಇಂತಹ ಟೂರ್ನಿ ಆಯೋಜಿಸಿದಾಗ ಕೆಲ ಮುಸ್ಲಿಂ ಆಟಗಾರರು ಸಮಸ್ಯೆ ಉಂಟುಮಾಡಿದ್ದರು. ಅದರ ನಂತರ ನಾಲ್ಕು ವರ್ಷಗಳ ಕಾಲ ನಾನು ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು. ಮುಸಲ್ಮಾನರ ನಿಷೇಧದಿಂದ ಶಾಂತಿಯುತವಾಗಿ ಸ್ಪರ್ಧೆ ಆಯೋಜಿಸಲು ಸಾಧ್ಯವಾಗುತ್ತದೆ ಎಂದು ಶಾಸಕರು ಹೇಳಿದರು.

- Advertisement -

ಇದೇ ಮೊದಲ ಬಾರಿಗೆ ಮುಸ್ಲಿಂ ಆಟಗಾರರನ್ನು ಕ್ರಿಕೆಟ್ ಆಡದಂತೆ ನಿರ್ಬಂಧಿಸಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಕ್ರಿಕೆಟಿಗ ಮತ್ತು ವಕೀಲ ತನ್ವೀರ್ ಸುಹೈಲ್ ಹೇಳಿದ್ದಾರೆ. ಇದು ತಪ್ಪು ಸಂಪ್ರದಾಯವಾಗಿದೆ ಮತ್ತು ಇದು ನಮ್ಮ ಭವಿಷ್ಯವನ್ನು ಪ್ರಶ್ನಿಸುತ್ತದೆ ಎಂದು ಸುಹೈಲ್ ಹೇಳಿದರು.

Join Whatsapp