ಲಖಿಂಪುರ ಖೇರಿ ಹಿಂಸಾಚಾರ: 12 ಮಂದಿ ರೈತರಿಗೆ ಸಿಟ್ ಸಮನ್ಸ್

Prasthutha|

ನವದೆಹಲಿ: ಕಳೆದ ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್.ಐ.ಟಿ) ಗುರುವಾರ 12 ಮಂದಿ ರೈತರಿಗೆ ಸಮನ್ಸ್ ಜಾರಿಗೊಳಿಸಿದೆ.

- Advertisement -

ಈ ಪೈಕಿ ಬಹುತೇಕ ರೈತರು ಸ್ಥಳದಲ್ಲೇ ಇದ್ದರೂ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಸಿಟ್ ಅಧಿಕಾರಿಗಳು ಸಿ.ಆರ್.ಪಿ.ಸಿ ಸೆಕ್ಷನ್ 41 ಮತ್ತು ಇತರ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಮಂದಿ ರೈತರನ್ನು ಬಂಧಿಸಲಾಗಿದ್ದು, ಹೆಚ್ಚಿನ ಆರೋಪಿಗಳಿಗಾಗಿ ಎಸ್.ಐ.ಟಿ ತಂಡ ಶೋಧ ನಡೆಸುತ್ತಿದೆ. ಸ್ಥಳದಲ್ಲಿದ ರೈತರ ಹೇಳಿಕೆಗಳನ್ನು ಪಡೆಯಲು ಸಮನ್ಸ್ ನೀಡಿದ್ದೇವೆಯೇ ಹೊರತು ಯಾರನ್ನೂ ಬಂಧಿಸಿಲ್ಲ ಎಂದು ಎಸ್.ಐ.ಟಿ ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ರೈತರ ಪರ ಹಿರಿಯ ವಕೀಲರಾದ ಹರ್ಜಿತ್ ಸಿಂಗ್ ವಾದ ಮಂಡಿಸಿದ್ದರು.

ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿಸಿ ಹತ್ಯೆ ನಡೆಸಿದ ನಂತರ ಉಂಟಾದ ಗಲಭೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ನಡೆಸಲಾಗಿತ್ತು ಮತ್ತು ಬೆಂಗಾವಲು ಪಡೆಯ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.

Join Whatsapp