ಭಾರತದಲ್ಲಿ ವಾಟ್ಸಪ್‌ ನಿಷೇಧಿಸಲು ನಿರ್ದೇಶಿಸುವಂತೆ ಕೋರಿ ಕೇರಳ ಹೈಕೋರ್ಟ್‌ ಗೆ ಅರ್ಜಿ

Prasthutha|

ನವದೆಹಲಿ : ಭಾರತದಲ್ಲಿ ವಾಟ್ಸಪ್‌ ನಿಷೇಧಿಸಲು ನಿರ್ದೇಶನ ಕೋರಿ ಕೇರಳ ಹೈಕೋರ್ಟ್‌ ಗೆ ಇಡುಕ್ಕಿಯ ಕೆ.ಜಿ. ಒಮನಕುಟ್ಟನ್‌ ಎಂಬವರು ಮನವಿ ಮಾಡಿದ್ದಾರೆ. ಸಾಫ್ಟ್‌ ವೇರ್‌ ಎಂಜಿನಿಯರ್‌ ಆಗಿರುವ ಒಮನಕುಟ್ಟನ್‌ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ವಾಟ್ಸಪ್‌ ಕಾರ್ಯ ನಿರ್ವಹಣೆಯನ್ನು ನಿಷೇಧಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.

- Advertisement -

ಭಾರತದ ಕಾನೂನನ್ನು ಪಾಲಿಸಲು ವಾಟ್ಸಪ್‌ ಸಹಕರಿಸುತ್ತಿಲ್ಲವಾದುದರಿಂದ, ವಾಟ್ಸಪ್‌ ಕಾರ್ಯ ನಿರ್ವಹಣೆಯನ್ನು ನಿಷೇಧಿಸಬೇಕೆಂದು ಅವರು ಕೋರಿದ್ದಾರೆ.

ವಾಟ್ಸಪ್‌ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ. ಹೊಸ ಐಟಿ ನಿಯಮಗಳನ್ನು ಪಾಲಿಸಬೇಕಾದಲ್ಲಿ ಪ್ರಜೆಗಳ ಗೌಪ್ಯತೆಯನ್ನು ಉಲ್ಲಂಘನೆ ಮಾಡಿದಂತಾಗಲಿದೆ ಎಂದು ವಾಟ್ಸಪ್‌ ವಾದಿಸಿದೆ. ಆದರೆ ವಾಟ್ಸಪ್‌ ಸ್ವತಃ ತನ್ನ ಗ್ರಾಹಕರ ಗೌಪ್ಯತೆಯನ್ನು ಉಲ್ಲಂಘನೆ ಮಾಡಿದ್ದು, ಈ ನೆಲೆದ ಕಾನೂನನ್ನು ದೂಷಿಸುವಂತಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

- Advertisement -

ದೇಶದ ಹಿತಾಸಕ್ತಿಗೆ ವಿರೋಧವಿರುವ ಹಲವು ಆಪ್‌ ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಹೀಗೆ ವಾಟ್ಸಪ್‌ ಅನ್ನೂ ನಿಷೇಧಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್‌ ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Join Whatsapp