ಕಾಸರಗೋಡು: ಜ್ಯುವೆಲ್ಲರಿಯಿಂದ ಚಿನ್ನಾಭರಣ ದೋಚಿ ಮಂಗಳೂರು ಮೂಲದ ಉದ್ಯೋಗಿ ಪರಾರಿ

Prasthutha|

ಕಾಸರಗೋಡು: ಇಲ್ಲಿನ ಪ್ರತಿಷ್ಠಿತ ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರ ವಂಚನೆ ನಡೆದಿದ್ದು, ಉದ್ಯೋಗಿಯು ಆಭರಣಗಳನ್ನು ದೋಚಿದ್ದಾನೆ ಎಂದು ವರದಿಯಾಗಿದೆ.

- Advertisement -

ಮಂಗಳೂರು-ಬಿ.ಸಿ ರೋಡ್ ನಿವಾಸಿ ಮುಹಮ್ಮದ್ ಫಾರೂಕ್ ವಂಚನೆ ಮಾಡಿರುವುದಾಗಿ ಹಿರಿಯ ಉದ್ಯೋಗಿಯೊಬ್ಬರು ಕಾಸರಗೋಡು ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಜ್ಯುವೆಲ್ಲರಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಫಾರೂಕ್, ಅಂಗಡಿಯಲ್ಲಿದ್ದ ಸುಮಾರು 2.5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾನೆ. ಜ್ಯುವೆಲ್ಲರಿಯ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನ ಮತ್ತು ವಜ್ರಗಳನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಜ್ಯುವೆಲ್ಲರಿ ಮಾಲೀಕರು ಕಳೆದುಹೋದ ಚಿನ್ನವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

- Advertisement -

ಕ್ರಿಕೆಟ್ ಆಡಲು ತೆರಳಿದ್ದ ಪತಿ ನಾಪತ್ತೆ ? ಪತ್ನಿಯಿಂದ ಬಂಟ್ವಾಳ ಠಾಣೆಯಲ್ಲಿ ದೂರು !

ವಂಚನೆ ಪ್ರಕರಣದಲ್ಲಿ ಕಾಸರಗೋಡು ಠಾಣೆಯಲ್ಲಿ ಫಾರೂಕ್ ವಿರುದ್ಧ ದೂರು ದಾಖಲಾಗಿದ್ದು, ಇದೇ ಸಂದರ್ಭ ಮುಹಮ್ಮದ್ ಫಾರೂಕ್ ಪತ್ನಿ ತನ್ನ ಪತಿ ಕ್ರಿಕೆಟ್ ಆಡಲೆಂದು ಮನೆಯಿಂದ ಹೋದವರು ಅ ಬಳಿಕ ಮನೆಗೆ ವಾಪಸ್ ಬಂದಿಲ್ಲ. ನ.28ರಂದು ಬೆಳಗ್ಗೆ 7:30ಕ್ಕೆ ಮನೆಯಿಂದ ಹೋದವರು ಹಿಂತಿರುಗಿ ಬಂದಿಲ್ಲ ಎಂದು ದೂರನ್ನು ದಾಖಲಿಸಿದ್ದಾರೆ.

Join Whatsapp