November 10, 2020
ಕರ್ನಾಟಕ ಉಪ ಚುನಾವಣೆ | ಭರ್ಜರಿ ಗೆಲುವಿನತ್ತ ಬಿಜೆಪಿ | ಸಿಎಂ ನಿವಾಸದಲ್ಲಿ ಸಿಹಿ ಹಂಚಿದ ನಾಯಕರು

ಬೆಂಗಳೂರು : ರಾಜ್ಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ ಪಕ್ಷದ ಮುಖಂಡರಲ್ಲಿ ಗೆಲುವಿನ ಸಂಭ್ರಮ ಕಂಡು ಬಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸರಕಾರದ ಹಿರಿಯ ಸಚಿವರ ಸಮ್ಮುಖದಲ್ಲಿ ಸಿಹಿ ಹಂಚಿ ಪಕ್ಷದ ಮುಖಂಡರು ಸಂಭ್ರಮಿಸಿದ್ದಾರೆ.
ಆರ್.ಆರ್. ಕೇತ್ರದಲ್ಲಿ ಮುನಿರತ್ನ ಅವರು ಭಾರೀ ಮುನ್ನಡೆ ಸಾಧಿಸಿದ್ದು, ಶಿರಾದಲ್ಲೂ ಬಿಜೆಪಿ ಅಭ್ಯರ್ಥಿಯೇ ಮುನ್ನಡೆಯಲ್ಲಿರುವುದು ಬಿಜೆಪಿ ಮುಖಂಡರಲ್ಲಿ ಖುಷಿಯ ಅಲೆ ಹರಡುವಂತೆ ಮಾಡಿದೆ.
ಬೆಂಗಳೂರಿನ ಸಿಎಂ ನಿವಾಸದಲ್ಲಿ ಬಿ.ಶ್ರೀರಾಮುಲು, ಆರ್. ಅಶೋಕ್, ಬಸವರಾಜ್ ಬೊಮ್ಮಾಯಿ ಮತ್ತು ಇತರ ಬಿಜೆಪಿ ನಾಯಕರು ಈ ವೇಳೆ ಉಪಸ್ಥಿತರಿದ್ದರು. ಎಲ್ಲಾ ನಾಯಕರು ಸಿಹಿ ಹಂಚಿ ಸಂಭ್ರಮದಲ್ಲಿ ಭಾಗಿಯಾದರು.
ಫೋಟೊ ಕೃಪೆ : ANI