ದಿಲ್ಲಿ ಹೈಕೋರ್ಟ್ ನಿಂದ ಸಮಾನ ನಾಗರಿಕ ಸಂಹಿತೆಯ ಸಮರ್ಥನೆ; ಅಸ್ವೀಕಾರಾರ್ಹವಾದುದು: ಪಾಪ್ಯುಲರ್ ಫ್ರಂಟ್

Prasthutha|

ಹೊಸದಿಲ್ಲಿ: ಕೇಂದ್ರ ಸರಕಾರದ ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ದಿಲ್ಲಿ ಹೈಕೋರ್ಟ್ ನೀಡಿರುವ ನಿರ್ದೇಶನವು ಅಪ್ರಾಸಂಗಿಕ, ಅನಪೇಕ್ಷಿತ ಮತ್ತು ಅಸ್ವೀಕಾರಾರ್ಹವಾದುದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೆಯರ್ ಮೆನ್ OMA ಸಲಾಂ ಹೇಳಿದ್ದಾರೆ.

- Advertisement -

ಈ ಕುರಿತು ಹೇಳಿಕೆ ನೀಡಿದ ಅವರು, ಸಮಾನ ನಾಗರಿಕ ಸಂಹಿತೆ ದೀರ್ಘ ಸಮಯದಿಂದ ಬಹಳಷ್ಟು ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದ್ದು, ಇದು ಅಲ್ಪಸಂಖ್ಯಾತರ ಹಕ್ಕುಗಳು, ವಿಶೇಷವಾಗಿ ಅವರ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದ್ದುದಾಗಿದೆ. ಆದಾಗ್ಯೂ, ಸುಪ್ರೀಂ ಕೋರ್ಟ್ ಹಲವು ಬಾರಿ ಈ ವಿಚಾರದ ಬಗ್ಗೆ ಅವಲೋಕನ ನಡೆಸಿದೆ ಮತ್ತು ವಿವಿಧ ಅಭಿಪ್ರಾಯಗಳನ್ನು ಹೇಳಿದೆ. ಆದರೆ ಸಮಾನ ನಾಗರಿಕ ಸಂಹಿತೆಯನ್ನು ಅನುಷ್ಠಾನಕ್ಕೆ ತರುವ ನಿರ್ಣಾಯಕ ನಿರ್ಧಾರವನ್ನು ಎಂದೂ ಮಾಡಿಲ್ಲ. ಈ ವರ್ಷದ ಪ್ರಾರಂಭದಲ್ಲಿ, ಸುಪ್ರೀಂ ಕೋರ್ಟ್ ಭಾರತದಲ್ಲಿ ತಟಸ್ಥ ಅನುವಂಶೀಯ ಧಾರ್ಮಿಕತೆ ಮತ್ತು ಉತ್ತರಾಧಿಕಾರದ ಕಾನೂನಿನ ಕುರಿತು ಕೇಂದ್ರದಿಂದ ಉತ್ತರ ಬಯಸಿತ್ತು ಮತ್ತು ಈ ವಿಚಾರದಲ್ಲಿ ತೀರ್ಪು ಬರಲು ಬಾಕಿ ಇದೆ ಎಂದು ಹೇಳಿದ್ದಾರೆ.  

ಸಮಾನ ನಾಗರಿಕ ಸಂಹಿತೆಗೆ ಹಾದಿಗೆ ಸುಗಮಗೊಳಿಸಲು ಬಿಜೆಪಿಯನ್ನು ಹೊರತುಪಡಿಸಿ ವಿವಿಧ ರಾಜಕೀಯ ಪಕ್ಷಗಳು ವೈಯಕ್ತಿಕ ಕಾನೂನನನ್ನು  ಕೊನೆಗೊಳಿಸುವ ವಿಚಾರದ ಪರವಿಲ್ಲ. ಇನ್ನು ಇದಕ್ಕೂ ಮೊದಲಿನ ಬಿಜೆಪಿ ಸರಕಾರಗಳಿಗೂ ಈ ಕುರಿತು ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಬಿಜೆಪಿ ಮತ್ತು ಹಿಂದುತ್ವ ರಾಜಕೀಯದಲ್ಲಿ ಅವರ ಸಹಯೋಗಿ ಗುಂಪುಗಳಿಗೆ ಈ ವಿಚಾರವು ಯಾವಾಗಲೂ ಕೋಮು ಧ್ರುವೀಕರಣಗೊಳಿಸಿ ಬಹುಸಂಖ್ಯಾತ ವರ್ಗಗಳ ಮತ ಗಳಿಸುವ ಒಂದು ಸರಳ ಅಸ್ತ್ರವಾಗಿತ್ತು. ಬಿಜೆಪಿಗೆ ಸನಿಹದಲ್ಲಿರುವ ಚುನಾವಣೆಗಳಲ್ಲಿ ಸೋಲಿನ ಭೀತಿ ಇರುವಾಗಲೆಲ್ಲಾ, ಅದು ಕೂಡಲೇ ಸಮಾನ ನಾಗರಿಕ ಸಂಹಿತೆ ಕಾನೂನಿನ ‘ಅಗತ್ಯ’ ಮತ್ತು ಮುಸ್ಲಿಮ್ ವೈಯಕ್ತಿಕ ಕಾನೂನಿನ ‘ಅಪಾಯ’ದಂತಹ ಹೂತು ಹೋಗಿರುವ ವಿಚಾರಗಳನ್ನು ಎತ್ತಿ ಧ್ರುವೀಕರಣದ ರಾಜಕೀಯದಲ್ಲಿ ಕಾರ್ಯಾಚರಿಸಲು ಪ್ರಾರಂಭಿಸುತ್ತದೆ. ಮೋದಿ ಮತ್ತು ಯೋಗಿ ಸರಕಾರಗಳ ವೈಫಲ್ಯಗಳನ್ನು ಮರೆಮಾಚುವ ನಿಟ್ಟಿನಲ್ಲಿ ಇದೀಗ ಬಿಜೆಪಿಗೆ ಅತ್ಯಂತ ಮಹತ್ವವಿರುವ ಯುಪಿ ಚುನಾವಣೆಯನ್ನು ಗಮನಿಸುತ್ತಾ, ಅದಕ್ಕೆ ಮತ್ತೊಮ್ಮೆ ಇದರ ಅತಿ ಅಗತ್ಯ ಬಿದ್ದಿದೆ.

- Advertisement -

ಸಮಾನ ನಾಗರಿಕ ಸಂಹಿತೆಯು ಮೂಲಭೂತವಾಗಿ ವಿವಾಹ, ವಿಚ್ಛೇದನ, ದತ್ತು ಪಡೆಯುವಿಕೆ, ಪರಂಪರೆ ಮತ್ತು ಉತ್ತರಾಧಿಕಾರದಂತಹ ವೈಯಕ್ತಿಕ ವಿಚಾರಗಳಲ್ಲಿ ದೇಶದ ಎಲ್ಲಾ ನಾಗರಿಕರಿಗೆ ಧರ್ಮವನ್ನು ಪರಿಗಣಿಸದೆ ನಿಯಂತ್ರಿಸುವ ಸಾಮಾನ್ಯ ಕಾನೂನಿನ ಸಮುಚ್ಚಯವನ್ನು ಸೂಚಿಸುತ್ತದೆ. ಪ್ರಸಕ್ತ ಈ ಅಂಶಗಳನ್ನು ವಿವಿಧ ಧರ್ಮಗಳ ಅನುಯಾಯಿಗಳಿಗೆ ವಿವಿಧ ಕಾನೂನುಗಳು ನಿಯಂತ್ರಿಸುತ್ತಿವೆ ಮತ್ತು ಸಮಾನ ನಾಗರಿಕ ಸಂಹಿತೆಯ ಉದ್ದೇಶ ಈ ಕಾನೂನುಗಳನ್ನು ಅಂತ್ಯಗೊಳಿಸುವುದಾಗಿದೆ.

ಆಧುನಿಕ ಭಾರತೀಯ ಸಮಾಜವು ‘ಸಜಾತೀಯ’ವಾಗುತ್ತಾ ಹೋಗುತ್ತಿದೆ ಮತ್ತು ಧರ್ಮ, ಸಮುದಾಯ ಮತ್ತು ಜಾತಿಯ ‘ಸಾಂಪ್ರದಾಯಿಕ ಅಡೆತಡೆಗಳು’ ಕೊನೆಗೊಳ್ಳುತ್ತಿವೆ ಮತ್ತು ಈ ಬದಲಾಗುತ್ತಿರುವ ಮಾದರಿಗಳನ್ನು ಗಮನಿಸುವುದಾದರೆ, ಇಲ್ಲಿ ಒಂದು ಸಮಾನ ನಾಗರಿಕ ಸಂಹಿತೆಯ ಅಗತ್ಯವಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ. ಈ ತರ್ಕವನ್ನು ಅಸಂಬದ್ಧ ಎಂದು ಹೇಳಬಹುದು. ಯಾಕೆಂದರೆ, ಪ್ರಸಕ್ತ ಅಧಿಕಾರ ಹಂಚಿಕೆಯು ‘ಸ್ವಜಾತೀಯ’ಗಿಂತಲೂ ಮಿಗಿಲಾಗಿ ಧರ್ಮ, ಸಮುದಾಯ ಮತ್ತು ಜಾತಿಯ ಆಧಾರದಲ್ಲಿ ಆಳವಾಗಿ ಮತ್ತು ಕೆಟ್ಟದಾಗಿ ವಿಭಜಿತವಾಗಿರುವ ಆಧುನಿಕ ಭಾರತವನ್ನು ಸೃಷ್ಟಿಸುತ್ತಿದೆ.

ನ್ಯಾಯಾಲಯದ ಅಭಿಪ್ರಾಯವು ನಂಬಿಕೆ ಮತ್ತು ಪ್ರಾಸಂಗಿಕತೆಯಿಂದ ಹೊರತಾಗಿದೆ. ಯಾಕೆಂದರೆ ಮೀನಾ ಸಮುದಾಯಕ್ಕೆ ಸೇರಿದವರಿಗೆ ಸಂಬಂಧಿಸಿ ಜಸ್ಟಿಸ್ ಪ್ರತಿಭಾ ಎಂ.ಸಿಂಗ್ ಮುಂದೆ ಬಂದಿರುವ ವಿಚಾರದಲ್ಲಿ ಹಿಂದು ವಿವಾಹ ಕಾಯ್ದೆ 1955 ಅನ್ವಯಿಸುತ್ತದೆ ಎಂದು ಒ.ಎಂ.ಎ.ಸಲಾಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp