ಜಾರ್ಖಂಡ್ ಸಿಎಂ ಚಂಪೈ ಸೊರೆನ್ ಹುದ್ದೆಗೆ ರಾಜೀನಾಮೆ

Prasthutha|

ಜಾರ್ಖಂಡ್: ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿ ಜೈಲು ಪಾಲಾದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹೇಮಂತ್ ಸೊರೆನ್‌ಗೆ ಮತ್ತೆ ಸಿಎಂ ಆಗಿ ಮರಳಲು ವೇದಿಕೆ ಕಲ್ಪಿಸಿದ್ದಾರೆ.

- Advertisement -

ಹೇಮಂತ್ ಸೊರೆನ್ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ, ಜೈಲಿನಿಂದ ಬಿಡುಗಡೆ ಕೂಡ ಆಗಿದ್ದಾರೆ. ಈ ಬೆನ್ನಲ್ಲೇ ಮತ್ತೆ ಜಾರ್ಖಂಡ್ ಸಿಎಂ ಸ್ಥಾನಕ್ಕೇರುವ ತಯಾರಿ ನಡೆಯುತ್ತಿದೆ.

ಮೈತ್ರಿ ಶಾಸಕರ ಒಮ್ಮತದ ನಂತರ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮರಳಲಿದ್ದಾರೆ. ಮೈತ್ರಿಕೂಟದ ನಾಯಕರು ಮತ್ತು ಶಾಸಕರು ಸಿಎಂ ಚಂಪೈ ಸೊರೆನ್ ಅವರ ನಿವಾಸದಲ್ಲಿ ಸಭೆ ಸೇರಿದ್ದು,ಜೆಎಂಎಂ ಶಾಸಕಾಂಗ ಪಕ್ಷದ ನಾಯಕರಾಗಿ ಹೇಮಂತ್ ಅವರನ್ನು ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.

Join Whatsapp