ಮಂಗಳೂರು | ಕಾಮಗಾರಿ ವೇಳೆ ಮಣ್ಣು ಕುಸಿತ ಪ್ರಕರಣ: ಮೂವರ ವಿರುದ್ಧ FIR

Prasthutha|

ಮಂಗಳೂರು: ಮಂಗಳೂರಿನಲ್ಲಿ ಓರ್ವ ಕಾರ್ಮಿಕರನ್ನು ಬಲಿ ಪಡೆದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಕಟ್ಟಡ ಕಾಮಗಾರಿ ಗುತ್ತಿಗೆದಾರ ಹರ್ಷವರ್ಧನ್, ನಾಗರಾಜ್ ಹಾಗೂ ಕಾಮಗಾರಿ ಸ್ಥಳದ ಮುಖ್ಯಸ್ಥ ಸಂತೋಷ್ ಎಂಬುವವರ ವಿರುದ್ಧ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಘಟನೆಯಲ್ಲಿ ಬದುಕುಳಿದ ಬಿಹಾರ ಮೂಲದ ಕಾರ್ಮಿಕ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ವೇಳೆ ಲೇಬರ್ ಕಾಂಟ್ರ್ಯಾಕ್ಟರ್ ವೇಣುಗೋಪಾಲ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

- Advertisement -

ಜುಲೈ 3ರಂದು ಮಂಗಳೂರಿನ ಬಲ್ಮಠ ಬಳಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ದುರಂತ ಸಂಭವಿಸಿತ್ತು.



Join Whatsapp