ಭೋಲೆ ಬಾಬಾ ಭದ್ರತಾ ಸಿಬ್ಬಂದಿ ಭಕ್ತರನ್ನು ನೂಕಿದ್ದೇ ಕಾಲ್ತುಳಿತಕ್ಕೆ ಕಾರಣ

Prasthutha|

ಲಖನೌ: ಉತ್ತರ ಪ್ರದೇಶದ ಹತ್ತಾಸ್‌ನಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನರು ಮೃತರಾದ ಘಟನೆಗೆ ಸ್ವಘೋಷಿತ ದೇವಮಾನವ ಭೋಲೆ ಬಾಬಾ ಅಥವಾ ನಾರಾಯಣ ಸಾಕಾರ ಹರಿ ಅವರ ಪಾದದ ದೂಳನ್ನು ಹಣೆಗೆ ಹಚ್ಚಿಕೊಳ್ಳಲು ಮುಂದಾದ ಭಕ್ತರನ್ನು ಅಲ್ಲಿದ್ದ ಖಾಸಗಿ ಭದ್ರತಾ ಸಿಬ್ಬಂದಿ ನೂಕಿದ್ದೇ ಪ್ರಮುಖ ಕಾರಣ ಎಂದು ಉಪ ವಿಭಾಗ ಮ್ಯಾಜಿಸ್ಟ್ರೇಟ್‌ ಸಿಕಂದರ್ ರಾವ್‌ ನಡೆಸಿದ ತನಿಖೆಯ ಪ್ರಾಥಮಿಕ ವರದಿ ಹೇಳಿದೆ.

- Advertisement -

ಭಕ್ತರು ನಾರಾಯಣ ಸಾಕಾರ್ ಹರಿ ಅವರ ಸಮೀಪ ತೆರಳಲು ವಾಹನದ ಬಳಿ ಬಂದಾಗ ಸ್ವಘೋಷಿತ ದೇವಮಾನವನ ಭದ್ರತಾ ಸಿಬ್ಬಂದಿ ಜನರನ್ನು ನೂಕಿದ್ದರಿಂದಾಗಿ ಒಬ್ಬರ ಮೇಲೊಬ್ಬರು ಬಿದ್ದಿದ್ದರಿಂದ ಕಾಲ್ತುಳಿತ ಉಂಟಾಗಿ 121 ಜನರ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಘಟನೆ ನಡೆದಾಗ ಸ್ವಯಂಸೇವಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಹಲವರ ಪ್ರಾಣ ಉಳಿಸಬಹುದಿತ್ತು. ಆದರೆ ಅವರೆಲ್ಲರೂ ಓಡಿ ಹೋಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆಎಂದಿದ್ದಾರೆ.

- Advertisement -

FIR ದಾಖಲು

ಕೇವಲ 80 ಸಾವಿರ ಜನರನ್ನು ಸೇರಿಸಲು ಮಾತ್ರ ಅನುಮತಿಯಿದ್ದ ಕಾರ್ಯಕ್ರಮಕ್ಕೆ 2.5 ಲಕ್ಷ ಜನರು ಸೇರುವ ಮೂಲಕ ಸಾಕ್ಷ್ಯಗಳನ್ನು ಮರೆಮಾಚಿದ್ದಾರೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಹತ್ರಾಸ್‌ನಲ್ಲಿ 121 ಜನರು ಕಾಲ್ತುಳಿತದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.



Join Whatsapp