ಕೆಜಿಎಫ್​ ಬಾಬು ನಿವಾಸ ಸೇರಿದಂತೆ 50 ಕಡೆ ಐಟಿ ದಾಳಿ

Prasthutha|

ಬೆಂಗಳೂರು: ಸುಮಾರು 50 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕೆಜಿಎಫ್​ ಬಾಬು ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ದಾಳಿ ನಡೆದಿದೆ.

- Advertisement -

ಕೆಲ ದಿನಗಳ ಹಿಂದೆ ಮಂಗಳೂರು, ಮೈಸೂರು ಸೇರಿದಂತೆ ಕೆಲ ಕಡೆ ಕಾಂಗ್ರೆಸ್ ಮುಖಂಡರುಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಮತ್ತೆ ನಗರದಲ್ಲಿ  ಅಧಿಕಾರಿಗಳು  ಕೆಜಿಎಫ್​ ಬಾಬು ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ 50 ಕಡೆ ಐಟಿ ಅಧಿಕಾರಿಗಳು ಇಂದು ಮುಂಜಾನೆಯಿಂದಲೇ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಹೈಗ್ರೌಂಡ್ಸ್ ಬಳಿಯಿರುವ ಕೆಜಿಎಫ್ ಬಾಬು ನಿವಾಸ ರುಕ್ಸಾನಾ ಪ್ಯಾಲೇಸ್​​’ನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಹಲವಾರು ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ದಾಳಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

- Advertisement -

ಕೆಲ ದಿನಗಳ ಹಿಂದೆ ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಕಾಂಗ್ರೆಸ್​ ಮುಖಂಡ ಗುರಪ್ಪನಾಯ್ಡು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಮೂರು ವಾಹನಗಳಲ್ಲಿ ಬನಶಂಕರಿ 2ನೇ ಹಂತಕ್ಕೆ ಬಂದ ಐಟಿ ಅಧಿಕಾರಿಗಳು ಗುರಪ್ಪನಾಯ್ಡು ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದರು.

ಗುರಪ್ಪ ನಾಯ್ಡು ಜೊತೆ ಗುರುತಿಸಿಕೊಂಡಿದ್ದ ಬಸಪ್ಪ ಎಂಬುವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಸಪ್ಪ ಅವರು ಅವೆನ್ಯೂ ರಸ್ತೆಯಲ್ಲಿ ಜುವೆಲ್ಲರಿ ಶಾಪ್ ಹೊಂದಿದ್ದಾರೆ. ಸದ್ಯ ಗುರಪ್ಪ ಹಾಗೂ ಬಸಪ್ಪ ಮನೆ, ಕಚೇರಿಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದರು.

Join Whatsapp