ಶಿಕ್ಷಣ ಸಚಿವರ ಬೆಂಗಾವಲು ವಾಹನ ಡಿಕ್ಕಿ : ರಸ್ತೆಯಲ್ಲೇ ಅಂಬುಲೆನ್ಸ್ ಪಲ್ಟಿ!

Prasthutha|

ತಿರುವನಂತಪುರಂ: ಕೇರಳ ಶಿಕ್ಷಣ ಸಚಿವರ ಬೆಂಗಾವಲು ಪಡೆ ವಾಹನ ಅಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಅಂಬುಲೆನ್ಸ್ ನಡುರಸ್ತೆಯಲ್ಲೇ ಎರಡು ಪಲ್ಟಿ ಹೊಡೆದು ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದ ಇಬ್ಬರು ಪೊಲೀಸರು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿರುವ ಘಟನೆ ಕೇರಳದ ತಿರುನಂತರಪುರಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಬುಧವಾರ ಘಟನೆ ನಡೆದಿದ್ದು ರಸ್ತೆ ಅಪಘಾತದಲ್ಲಿ ರೋಗಿಯೂ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಬೆಂಗಾವಲು ಪಡೆ ವಾಹನ ಚಾಲಕ ಹಾಗೂ ಅಂಬುಲೆನ್ಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರ ಬೆಂಗಾವಲು ಪಡೆಯ ವಾಹನ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವೇಳೆ ಡಿಕ್ಕಿ ಹೊಡೆದಿದೆ. ನಂತರ ಅಂಬುಲೆನ್ಸ್‌ ಎರಡು ಪಲ್ಟಿ ಹೊಡೆದು ಬಿದ್ದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

- Advertisement -

ಸಚಿವರು ಬರುತ್ತಿದ್ದ ಕಾರಣಕ್ಕಾಗಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಪೊಲೀಸರು ಮುಂದಾಗಿದ್ದರು. ಆದ್ರೆ ಸಚಿವರ ಬೆಂಗಾವಲು ವಾಹನ ಪ್ರವೇಶಿಸುವ ಸಮಯಕ್ಕೆ ಅಂಬುಲೆನ್ಸ್ ಮಧ್ಯೆ ನುಗ್ಗಿದ್ದರಿಂದ ಡಿಕ್ಕಿ ಹೊಡೆದಿದೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಘಟನೆ ಬಗ್ಗೆ ಸಚಿವ ಶಿವನ್‌ಕುಟ್ಟಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.