ಇಸ್ರೇಲ್ ಸರಕಾರ ಪತನ | ಮಧ್ಯರಾತ್ರಿ ಸಂಸತ್ ವಿಸರ್ಜನೆ; ಎರಡು ವರ್ಷದಲ್ಲಿ ನಾಲ್ಕನೇ ಬಾರಿ ಚುನಾವಣೆ

Prasthutha|

ಜೆರುಸಲೇಂ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ನೇತೃತ್ವ ಸರಕಾರ ಮತ್ತೆ ಪತನವಾಗಿದ್ದು, ರಾತೋರಾತ್ರಿ ಸಂಸತ್ ವಿಸರ್ಜನೆ ಮಾಡಲಾಗಿದೆ. ಹೀಗಾಗಿ ಇಸ್ರೇಲ್ ನಲ್ಲಿ ಮತ್ತೊಮ್ಮೆ ದಿಢೀರ್ ಚುನಾವಣೆ ಎದುರಾಗಿದೆ.

- Advertisement -

ಇಲ್ಲಿ ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಸರಕಾರ ಪತನವಾಗಿದ್ದು, ನಾಲ್ಕನೇ ಬಾರಿಗೆ ಚುನಾವಣೆ ನಡೆಯಲಿದೆ.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಏಳು ತಿಂಗಳ ಹಿಂದೆ ಪ್ರಮುಖ ಎದುರಾಳಿ ಬೆನ್ನಿಗಾಂಟ್ಜ್ ಅವರ ಸಹಕಾರದೊಂದಿಗೆ ಸರಕಾರ ರಚಿಸಿದ್ದರು. ನೆತನ್ಯಾಹು ಅವರ ಲಿಕುಡ್ ಪಾರ್ಟಿ ಮತ್ತು ಬೆನ್ನಿಗಾಂಟ್ಜ್ ಅವರ ಬ್ಲೂ ಆಂಡ್ ವೈಟ್ ಪಾರ್ಟಿ ಮೈತ್ರಿಕೂಟ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ಸರಕಾರ ಪತನವಾಗಿದೆ. ಮುಂದಿನ ಮೂರು ತಿಂಗಳೊಳಗೆ ಚುನಾವಣೆ ನಡೆಯಬೇಕಿದ್ದು, ಮಾ.23ಕ್ಕೆ ಮತದಾನ ನಿಗದಿಯಾಗಿದೆ ಎಂದು ವರದಿಗಳು ತಿಳಿಸಿವೆ.

Join Whatsapp