IPL-2022 ಮೆಗಾ ಹರಾಜು: 2 ಕೋಟಿ‌ ಮೂಲ ಬೆಲೆಯ 10 ಸ್ಟಾರ್ ಆಟಗಾರರ ಪಟ್ಟಿ ಬಿಡುಗಡೆ. ಅಂತಿಮ ಕಣದಲ್ಲಿ 590 ಆಟಗಾರರು !

Prasthutha|

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌-2022 ಟೂರ್ನಿಯ ಮೆಗಾ ಹರಾಜು ನಡೆಯಲು ಕೆಲವೇ ದಿನಗಳಷ್ಟೇ ಬಾಕಿ ಇರುವಾಗ 2 ಕೋಟಿ ಮೂಲ ಬೆಲೆ ನಿಗದಿಪಡಿಸಲಾಗಿರುವ 10 ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.
10 ಶ್ರೇಷ್ಠ ಆಟಗಾರರಲ್ಲಿ ನಾಲ್ವರು ಭಾರತೀಯ ಆಟಗಾರರು ಹಾಗೂ 6 ಮಂದಿ ವಿದೇಶಿ ಆಟಗಾರರಿದ್ದಾರೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಈ ಬಾರಿಯ ಮೆಗಾ ಹರಾಜು ನಡೆಯಲಿದೆ.

- Advertisement -

2 ಕೋಟಿ‌ ಮೂಲ ಬೆಲೆಯ 10 ಸ್ಟಾರ್ ಆಟಗಾರರು
ಶಿಖರ್ ಧವನ್, ಮುಹಮ್ಮದ್ ಶಮಿ, ಫಾಫ್ ಡುಪ್ಲೆಸ್ಸಿ, ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಶ್ರೇಯಸ್ ಅಯ್ಯರ್, ಆರ್.ಅಶ್ವಿನ್, ಕ್ವಿಂಟನ್ ಡಿ ಕಾಕ್, ಕಗಿಸೊ ರಬಾಡಾ ಹಾಗೂ ಟ್ರೆಂಟ್‌ ಬೌಲ್ಟ್.

ಐಪಿಎಲ್-2022ರ ಹರಾಜಿನಲ್ಲಿ ಭಾಗವಹಿಸಲು ಒಟ್ಟು 1214 ಆಟಗಾರರು ಹೆಸರು ನೊಂದಾಯಿಸಿದ್ದರು. ಇದೀಗ ಅಂತಿಮ ಪಟ್ಟಿಯಲ್ಲಿ 370 ಭಾರತೀಯರು ಮತ್ತು 220 ವಿದೇಶಿ ಆಟಗಾರರ ಸೇರಿದಂತೆ ಒಟ್ಟು 590 ಆಟಗಾರರು ಸ್ಥಾನ ಪಡೆದಿದ್ದಾರೆ.
590 ಆಟಗಾರರ ಪೈಕಿ 228 ಮಂದಿ ಕ್ಯಾಪ್ಡ್ ಮತ್ತು 355 ಮಂದಿ ಅನ್ ಕ್ಯಾಪ್ಡ್ ಆಟಗಾರರಿದ್ದಾರೆ. ಏಳು ಮಂದಿ ಅಸೋಸಿಯೇಟ್ ದೇಶದ ಅಟಗಾರರಿದ್ದಾರೆ.
ಎರಡು ಕೋಟಿ ಮೂಲ ಬೆಲೆ ಹೊಂದಿರುವ 48 ಆಟಗಾರರು, 1.5 ಕೋಟಿ ರೂ. ಮೂಲಬೆಲೆ ಹೊಂದಿರುವ 20 ಆಟಗಾರರು ಮತ್ತು ಒಂದು ಕೋಟಿ ಮೂಲಬೆಲೆ ಹೊಂದಿರುವ 34 ಮಂದಿ ಆಟಗಾರರ ಹೆಸರು ಅಂತಿಮವಾಗಿದೆ.

Join Whatsapp