ಫುಟ್ ಬೋರ್ಡ್ ಮೇಲೆ ವಿದ್ಯಾರ್ಥಿನಿ ಪ್ರಯಾಣ: ಬಸ್ ಚಾಲಕನಿಗೆ ದಂಡ

Prasthutha|

- Advertisement -

ಮಂಗಳೂರು: ಫುಟ್ ಬೋರ್ಡ್ ಮೇಲೆ ವಿದ್ಯಾರ್ಥಿನಿಯನ್ನು ಪ್ರಯಾಣಿಸುವಂತೆ ಮಾಡಿ ಆಕೆಯ ಜೀವದ ಜೊತೆ ಚೆಲ್ಲಾಟವಾಡಿದ ಖಾಸಗಿ ಬಸ್  ವಿರುದ್ಧ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನಿಂದ ಬೋಂದೆಲ್  ಮಾರ್ಗದಲ್ಲಿ ಹೋಗುವ ಖಾಸಗಿ ಬಸ್ಸೊಂದರಲ್ಲಿ ಫುಡ್ ಬೋರ್ಡ್ ಮೇಲೆ ವಿದ್ಯಾರ್ಥಿನಿ ಪ್ರಯಾಣಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು. ವೀಡಿಯೋ ನೋಡಿದ ಸಾರ್ವಜನಿಕರು ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

- Advertisement -

ಬೇಕಾಬಿಟ್ಟಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ಬಸ್ ನಲ್ಲಿ ಕಾಲಿರಿಸಲೂ ಜಾಗ ಇಲ್ಲದ್ದರಿಂದ ವಿದ್ಯಾರ್ಥಿನಿ ಹಲವು ಕಿ.ಮೀ.ದೂರದವರೆಗೂ ಬಸ್ಸಿನ ಫುಟ್ ಬೋರ್ಡ್ ಮೇಲೆ ನಿಂತೇ ಪ್ರಯಾಣಿಸಿದ್ದಳು.

ಕೋವಿಡ್ ನಿರ್ಬಂಧವಿದ್ದರೂ ಅದನ್ನು ನಿರ್ಲಕ್ಷಿಸಿ ಬೇಕಾಬಿಟ್ಟಿ ಪ್ರಯಾಣಿಕರನ್ನು ತುಂಬಿ ಕೊಂಡು ನಿರ್ಲಕ್ಷ್ಯ ತೋರಿದ ಮಂಗಳೂರಿನಿಂದ-ಬೋಂದೆಲ್  ಹೋಗುವ ಬಸ್ ನ ಚಾಲಕನಿಗೆ ಸಂಚಾರಿ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Join Whatsapp