ಅಫ್ಘಾನ್ ನಿಂದ ಭಾರತೀಯ ರಾಜತಾಂತ್ರಿಕ, ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಏರ್ ಇಂಡಿಯಾ

Prasthutha|

ಹೊಸದಿಲ್ಲಿ: ತಾಲಿಬಾನ್ ವಶವಾದ ಅಫ್ಘಾನ್ ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ರಾಜತಾಂತ್ರಿಕರು ಸೇರಿದಂತೆ 150 ಕ್ಕೂ ಅಧಿಕ ನಾಗರಿಕರನ್ನು ಅಫ್ಘಾನ್ ನಿಂದ ಸ್ಥಳಾಂತರಿಸಲಾಗಿದೆ. 150 ಕ್ಕೂ ಮಿಕ್ಕಿದ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿ-17 ವಿಮಾನವು ಮಂಗಳವಾರ ಸುರಕ್ಷಿತವಾಗಿ ಭಾರತ ತಲುಪಿದೆಯೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

- Advertisement -

ಅಫ್ಘಾನ್ ನಿಂದ ಹೊರಟ ವಿಮಾನದಲ್ಲಿ ಭಾರತೀಯ ರಾಯಭಾರಿ ರೊನೇಂದ್ರ ಟಂಡನ್, ರಾಯಭಾರಿ ಕಚೇರಿಯ ಸಿಬ್ಬಂದಿಗಳು ಮತ್ತು ಕುಟುಂಬ, ಪತ್ರಕರ್ತರು ಒಳಗೊಂಡಿದ್ದಾರೆಂದು ಮೂಲಗಳು ಸ್ಪಷ್ಟಪಡಿಸಿವೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿ- 17 ವಿಮಾನ ಭಾನುವಾರ 180 ಪ್ರಯಾಣಿಕರನ್ನು ಈಗಾಗಲೇ ಸ್ಥಳಾಂತರಿಸಿತ್ತು.

ಅಫ್ಘಾನ್ ನ ಕಾಬೂಲ್ ನಲ್ಲಿ ಕಳೆದ ಕೆಲವು ದಿನಗಳಿಂದ ಭದ್ರತಾ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಸೋಮವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲದೆ ಅಫ್ಘಾನ್ ನ ಎಲ್ಲಾ ಬೆಳವಣಿಗೆಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದರು.

- Advertisement -

ಅಫ್ಘಾನ್ ಸಿಲುಕಿರುವ ಸಿಖ್, ಹಿಂದೂ ಸಮುದಾಯ ಸೇರಿದಂತೆ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ ಜರುಗಿಸಲಾಗಿದೆ. ಈ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

Join Whatsapp