November 26, 2020
ಏಷ್ಯಾ ಖಂಡದಲ್ಲೇ ಭಾರತ ಅತ್ಯಂತ ಭ್ರಷ್ಟ ದೇಶ : ವರದಿ

ನವದೆಹಲಿ : ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ಅಧಿಕಾರದಲ್ಲಿದ್ದೂ, ಭಾರತ ಏಷ್ಯಾ ಖಂಡದಲ್ಲೇ ಅತ್ಯಂತ ಭ್ರಷ್ಟ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಏಷ್ಯಾ ಖಂಡದಲ್ಲಿಯೇ ಭಾರತದಲ್ಲಿ ಲಂಚದ ಪ್ರಮಾಣ ಹೆಚ್ಚು. ಇಲ್ಲಿ ಸರಕಾರಿ ಸೇವೆ ಪಡೆದುಕೊಳ್ಳಲು ಬಹುತೇಕರು ವ್ಯಕ್ತಿಗತ ಸಂಪರ್ಕದ ನೆರವು ಪಡೆಯುತ್ತಾರೆ ಎಂದು ವರದಿ ತಿಳಿಸಿದೆ. ಭ್ರಷ್ಟಾಚಾರ ಸ್ವರೂಪ ಮೇಲಿನ ಕಣ್ಗಾವಲು ಸಂಸ್ಥೆ ‘ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಶನಲ್’ನ ನೂತನ ವರದಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ.
ಭ್ರಷ್ಟಾಚಾರ ಕುರಿತ ಜಾಗತಿಕ ಮಾನದಂಡ ಅನುಸಾರ, ಏಷ್ಯಾದಲ್ಲೇ ಶೇ.50 ಮಂದಿ ಲಂಚ ನೀಡಿದರೆ, ಶೇ.32ರಷ್ಟು ಜನ ವೈಯಕ್ತಿಕ ಸಂಪರ್ಕದ ಲಾಭದ ನೆರವಿನಲ್ಲಿ ಸರಕಾರಿ ಸೇವೆ ಪಡೆಯುತ್ತಾರೆ.
ಭಾರತದಲ್ಲಿ ಭ್ರಷ್ಟಾಚಾರದ ಪ್ರಮಾಣ ಶೇ.39ರಷ್ಟಿದೆ. ವೈಯಕ್ತಿಕ ಸಂಪರ್ಕದ ಪ್ರಭಾವ ಬಳಸಿ ಸೇವೆಯನ್ನು ಪಡೆಯುವವರ ಪಟ್ಟಿಯಲ್ಲಿ ಭಾರತ ಶೇ.46ರ ಪಾಲನ್ನು ಪಡೆದಿದೆ. ಭಾರತದಲ್ಲಿ ಶೇ.63 ಮಂದಿ ಒಂದು ವೇಳೆ ಭ್ರಷ್ಟಾಚಾರ ಕುರಿತು ದೂರು ನೀಡಿದರೆ ಪ್ರತಿಕೂಲ ಪರಿಣಾಮಗಳಿಗೆ ತುತ್ತಾಗಬೇಕಾದೀತು ಎಂದು ಹೆದರುತ್ತಾರೆ.