ದೇಶದಲ್ಲಿ ಉತ್ತಮ ಹಿಂಗಾರು ಮಳೆಯ ಸಾಧ್ಯತೆ: ಹವಾಮಾನ ಇಲಾಖೆ

Prasthutha|

ಹೊಸದಿಲ್ಲಿ: ಅಕ್ಟೋಬರ್ ನಲ್ಲಿ ಉತ್ತಮ ಹವಾಮಾನವಿದ್ದು ತಿಂಗಳಿಡೀ ದೇಶದ ನಾನಾ ಕಡೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

- Advertisement -

ತಮಿಳುನಾಡಿನಲ್ಲಿ ಇಡೀ ಅಕ್ಟೋಬರ್ ನಲ್ಲಿ ಹಿಂಗಾರು ಮಳೆ ಸುರಿಯಲಿದ್ದು, ಸದ್ಯ ಅಲ್ಲಿ ಉತ್ತಮ ಮಳೆಯಾಗುತ್ತಿದೆ. ಕರ್ನಾಟಕದಲ್ಲೂ ಎರಡು ದಿನ ಮಳೆ ಇರಲಿದ್ದು, ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ.

ಮುಂದಿನ ಐದು ದಿನಗಳಲ್ಲಿ ಮುಂಗಾರು ಸಂಪೂರ್ಣವಾಗಿ ದೇಶದ ಎಲ್ಲ ಕಡೆ ಕೊನೆಗೊಳ್ಳಲಿದೆ. ಮೋಡದ ವಾತಾವರಣವಿದ್ದರೂ ದಿಲ್ಲಿಯಲ್ಲಿ 28.9 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇತ್ತು. ಅಲ್ಲೂ ಬುಧವಾರ ಮಳೆ ಬರುವ ಸೂಚನೆ ಇದೆ. 

- Advertisement -

ಮಹಾರಾಷ್ಟ್ರದ ಕರಾವಳಿ, ಗೋವಾ, ತಮಿಳುನಾಡು, ಕರ್ನಾಟಕದಲ್ಲಿ ಮಳೆ ಇರದೆ, ಮಹಾರಾಷ್ಟ್ರದ ಒಳ ಭಾಗದಲ್ಲಿ ಮಳೆಯು ಹರಡಿದಂತೆ ಬರಲಿದೆ. ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಕೆಲ ದಿನಗಳ ಮಳೆ ಉಂಟಾಗಲಿದೆ. ಬುಧವಾರ ಸಿಕ್ಕಿಂ, ಕಾಲಿಂಪೋಂಗ್, ಜಲಫೈಗುರಿ, ಆಲಿಪುರ್ದಾರ್, ಡಾರ್ಜಿಲಿಂಗ್ ಮತ್ತು ಬಂಗಾಳದಲ್ಲಿ ಮಳೆ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಸಿಕ್ಕಿಂ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ವಾತಾವರಣದ ತಾಪಮಾನ ಕುಸಿಯಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ , ಮಣಿಪುರ, ಮಿಜೋರಾಂ, ತ್ರಿಪುರಾಗಳಲ್ಲಿ ಮುಂಗಾರು ಕೊನೆಯ ಮಳೆ ನಾಲ್ಕು ದಿನ ಇರುತ್ತದೆ.

ಈಶಾನ್ಯ ಭಾರತದ ಜೊತೆಗೆ ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶಗಳಲ್ಲಿ ಸಾಧಾರಣ ಮಳೆ ಇರುತ್ತದೆ. ಉತ್ತರ ಪ್ರದೇಶ, ಚತ್ತೀಸ್ಗಢ, ಒಡಿಶಾ, ತೆಲಂಗಾಣ, ಲಕ್ಷದ್ವೀಪಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಲಡಾಕ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಗುಜರಾತ್ ಗಳಲ್ಲಿ ಮಳೆ ಅಲ್ಲಲ್ಲಿ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Join Whatsapp