ಪಾಕಿಸ್ತಾನದ ಜೊತೆ ವ್ಯಾಪಾರ ಮರು ಆರಂಭಿಸಿ ಎಂದ ಪಂಜಾಬ್; ಟೀಕಿಸಿದ ಕಾಂಗ್ರೆಸ್, ಬಿಜೆಪಿ

Prasthutha|

ನವದೆಹಲಿ: ಮುಖ್ಯಮಂತ್ರಿ ಭಗವಂತ ಮಾನ್ ನೇತೃತ್ವದ ಪಂಜಾಬಿನ ಆಮ್ ಆದ್ಮಿ ಪಕ್ಷದ ಸರಕಾರವು ಪಾಕಿಸ್ತಾನದ ಜೊತೆಗೆ ಮುಕ್ತ ವ್ಯಾಪಾರ ವ್ಯವಹಾರ ನಡೆಸಲು ಕರೆ ಕೊಟ್ಟರೆ, ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆಮ್ ಆದ್ಮಿಯ ಪಾಕ್ ಪ್ರೇಮ ಎಂದು ಟೀಕಿಸಿವೆ.

- Advertisement -

ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು, ಎಎಪಿ ಅಲ್ಲ ಪಿಪಿಪಿ- ಪಾಕ್ ಪರಸ್ತ್ ಪಾರ್ಟಿ ಎಂದು ಟೀಕಿಸಿದ್ದಾರೆ. “ಕಾಂಗ್ರೆಸ್ಸಿನ ಪಾಕ್ ಪ್ರೇಮಕ್ಕೆ ಈಗಿನ ಎಎಪಿಯ ಪಾಕ್ ಪರಸ್ತ್ ಪಾರ್ಟಿ ಸಮಾನವಾಗಿದೆ. ಕಾಂಗ್ರೆಸ್ ಮತ್ತು ಎಎಪಿಗಳು ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಶ್ನಿಸಿದರು, ಬಾಲಕೋಟ್ ಪ್ರಕರಣಕ್ಕೆ ಸಾಕ್ಷ್ಯ ಕೇಳಿದರು, ಪುಲ್ವಾಮಾವನ್ನು ಟೀಕಿಸಿದರು” ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

“ಒಂದು ಕಡೆ ಕೇಜ್ರೀವಾಲ್ ತಾನು ಕಟ್ಟಾ ದೇಶ ಭಕ್ತ ಎನ್ನುತ್ತಾರೆ. ಆದರೆ ಅವರು ನಿಜವಾಗಿ ಓಟು ಬ್ಯಾಂಕ್ ಭಕ್ತ. ಪಾಕಿಸ್ತಾನದ ಒಲವಿನ ಮೂಲಕ ಹಿಂದೂಗಳನ್ನು ಹೀಗಳೆದು ಎಎಪಿ ಈಗ ಕಾಂಗ್ರೆಸ್ಸಿನ ಕನ್ನಡಿ ಪ್ರತಿಬಿಂಬವಾಗಿದೆ. ಎಎಪಿ ಈಗ ಪಕ್ಕಾ ಪಿಪಿಪಿ- ಪಾಕ್ ಪರಸ್ತ್ ಪಾರ್ಟಿ” ಎಂದು ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

- Advertisement -

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿಯನ್ನು ನಿಷೇಧಿಸಿದ ಎರಡು ದಿನಗಳ ಬಳಿಕ 2019ರ ಆಗಸ್ಟ್ 7ರಂದು ಇಸ್ಲಾಮಾಬಾದ್ ಪಾಕಿಸ್ತಾನದೊಂದಿಗಿನ ವ್ಯಾಪಾರವನ್ನು ನಿಲ್ಲಿಸಿತ್ತು. ಎರಡೂ ಕಡೆ ಅದಕ್ಕೆ ಆಗ ಒತ್ತಡವಿತ್ತು. ಪಂಜಾಬಿನ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಿ ಕುಲ್ದೀಪ್ ಸಿಂಗ್ ದಲಿವಾಲ್ ಅವರು ಬೆಂಗಳೂರಿನಲ್ಲಿ ಜುಲೈ 14- 15ರಂದು ನಡೆದ ಕೃಷಿ ಮತ್ತು ತೋಟಗಾರಿಕೆ ಮಂತ್ರಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಪಾಕಿಸ್ತಾನದ ಜೊತೆ ಮತ್ತೆ ವ್ಯಾಪಾರ ಆರಂಭಿಸಲು ಒತ್ತಾಯ ಮಾಡಿದ್ದರು.

ಈಗ ಮುಖ್ಯಮಂತ್ರಿಗಳು ಇದನ್ನು ಸರಕಾರದ ನಿಲುವು ಎಂದು ಬಹಿರಂಗವಾಗಿ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷವೂ ಸಹ ಎಎಪಿ ಒತ್ತಾಯವನ್ನು ಪ್ರಶ್ನಿಸಿದೆ. ಪಾಕಿಸ್ತಾನ ಮತ್ತು ಭಾರತ ರಾಯಭಾರ ಸಂಬಂಧ ಮರು ಸ್ಥಾಪಿಸದಿರುವಾಗ ವ್ಯಾಪಾರ ಸಂಬಂಧ ಹೇಗೆ ಸಾಧ್ಯ ? ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಾಜಿ ಮಂತ್ರಿ ಮನೀಶ್ ತಿವಾರಿ ಕೇಳಿದ್ದಾರೆ.

“ಪಂಜಾಬಿನ ಪಾಕ್ ಪರ ನಿಲುವು ಇದು ಮುಗ್ಧತೆಯೋ ಅರಿಯದಿರುವಿಕೆಯೋ? ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರದ ವಿಧಿ ನೀಗಿದ ಮೇಲೆ ಭಾರತ – ಪಾಕಿಸ್ತಾನದ ನಡುವೆ ಯಾವುದೇ ಮಟ್ಟದ ಮಾತುಕತೆ ಇಲ್ಲ ಎಂಬುದು ಎಎಪಿಯ ಕುಲ್ದೀಪ್ ಸಿಂಗ್ ರಿಗೆ ತಿಳಿದಿಲ್ಲವೆ? ನಾವಿನ್ನೂ ರಾಯಭಾರಿ ಸಂಬಂಧವನ್ನು ಮರು ಸ್ಥಾಪಿಸಿಲ್ಲ. ಹಾಗಿರುವಾಗ ವ್ಯಾಪಾರ ಹೇಗೆ?” ಎಂದು ಆನಂದ್ ಪುರ್ ಸಾಹಿಬ್ ಲೋಕ ಸಭಾ ಕ್ಷೇತ್ರದ ಪ್ರತಿನಿಧಿ ತಿವಾರಿ ಟ್ವೀಟ್ ಮಾಡಿದ್ದಾರೆ.

ದಿಲ್ಲಿಯ ಬಿಜೆಪಿ ನಾಯಕ ಮನ್ಜಿಂದರ್ ಸಿಂಗ್ ಸಿರ್ಸಾ ಸಹ ಪಂಜಾಬಿನ ಎಎಪಿ ಸರಕಾರವನ್ನು ಟೀಕಿಸಿದ್ದಾರೆ.

“ಪಂಜಾಬಿನಿಂದ ಬರುವ ಮಾದಕ ದ್ರವ್ಯಗಳು ಪಾಕಿಸ್ತಾನದ ಜೊತೆಗಿನ ಸಂಬಂಧ ಮರು ಸ್ಥಾಪಿಸುವ ಮಾತಾಡಿದ್ದಾರೆ. ಕೇಜ್ರೀವಾಲ್ ಅವರ ವಶೀಲಿಬಾಜಿಯು ಪಂಜಾಬ್ ಎಎಪಿ ಸರಕಾರವು ಪಾಕಿಸ್ತಾನ ಪ್ರೇಮ ತೋರಿಸಲು ಹಾದಿ ಮಾಡಿದೆ ಎಂದು ಸಿರ್ಸಾ ಟ್ವೀಟ್ ಮಾಡಿದ್ದಾರೆ.

Join Whatsapp