ಕಾಸರಗೋಡು | ಟ್ಯಾಂಕರ್ ನಿಂದ ಅನಿಲ ಸೋರಿಕೆ: ಸುತ್ತಮುತ್ತಲಿನ ಕುಟುಂಬಗಳ ಸ್ಥಳಾಂತರ

Prasthutha|

ಕಾಸರಗೋಡು: ಚಲಿಸುತ್ತಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆ ಉಂಟಾದ ಘಟನೆ ಕಾಸರಗೋಡಿನ ಚಿತ್ತಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದ್ದು , ಗಂಟೆಗಳ ಬಳಿಕ ಸೋರಿಕೆ ತಡೆಗಟ್ಟಲಾಗಿದೆ.

- Advertisement -

ಸುತ್ತಲಿನ ಸುಮಾರು 500ಮೀಟರ್ ನಷ್ಟು ದೂರದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಈ ರಸ್ತೆಯ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೋರಿಕೆ ಕಂಡು ಬಂದ ಹಿನ್ನೆಲೆ ಕೂಡಲೇ ಚಾಲಕ ಟ್ಯಾಂಕರ್ ನಿಲುಗಡೆ ಗೊಳಿಸಿ ಕಂಪೆನಿ ಅಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಟ್ಯಾಂಕರ್ ಮಂಗಳೂರಿನಿಂದ ಕೋಝಿಕ್ಕೋಡ್ ಗೆ ತೆರಳುತ್ತಿತ್ತು ಎನ್ನಲಾಗಿದೆ.

Join Whatsapp