ನಾಳೆ SDPI ಹರೇಕಳ ವತಿಯಿಂದ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ ಮತ್ತು ಸಾರ್ವಜನಿಕ ಸಮಾವೇಶ

Prasthutha|

ಹರೇಕಳ : ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹರೇಕಳ ಗ್ರಾಮ ಸಮಿತಿ ವತಿಯಿಂದ, ಹರೇಕಳ ಗ್ರಾಮದ ಐಕು, ಮಿಷನ್ ಕಂಪೌಂಡ್ ಪ್ರದೇಶದಲ್ಲಿ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನೆ ಸಮಾರಂಭ ಮತ್ತು ಸಾರ್ವಜನಿಕ ಸಮಾವೇಶ ಮಾರ್ಚ್ 19ರ ಆದಿತ್ಯವಾರ ಸಂಜೆ 4.30ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ದುವಾ ಆಶೀರ್ವಚನದೊಂದಿಗೆ ಅಸ್ಸಯ್ಯದ್ ಶರಫುದ್ದೀನ್ ಅಲ್ ಹೈದ್ರೋಸ್ ತಂಙಳ್ ಚಾಲನೆ ನೀಡಲಿದ್ದು, ಉದ್ಘಾಟನೆಯನ್ನು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ನೆರೆವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ಸಹಿತ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಎಸ್’ಡಿಪಿಐ ಮುಖಂಡರುಹಾಗು ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಸಾಧನೆಗೈದ ನಾಯಕರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -