ಕಿರಣ್ ಪಟೇಲ್ ಗೃಹ ಸಚಿವ ಅಮಿತ್ ಶಾರ ಆಪ್ತನೇ?: ನೆಟ್ಟಿಗರ ಪ್ರಶ್ನೆ

Prasthutha|

ನವದೆಹಲಿ: ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ವಂಚಿಸಿದ ಆರೋಪದಲ್ಲಿ ಕಾಶ್ಮೀರ ಪೊಲೀಸರಿಂದ ಬಂಧಿತನಾಗಿರುವ ಡಾ. ಕಿರಣ್ ಪಟೇಲ್ ಎಂಬಾತ ಗೃಹ ಮಂತ್ರಿ ಅಮಿತ್ ಶಾ ಅವರ ಪರವಾಗಿ ಹೋದ ವ್ಯಕ್ತಿ ಎಂದು ಅಂತರಜಾಲಗಳಲ್ಲಿ ಸಾಕಷ್ಟು ಜನರು ಅನುಮಾನ ಪ್ರಕಟಿಸಿ ಬರೆಯುತ್ತಿದ್ದಾರೆ.
ಕಿರಣ್ ಪಟೇಲ್’ಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು. ಕೇಂದ್ರ ಗೃಹ ಮಂತ್ರಿಗಳ ಅನುಮತಿ ಇಲ್ಲದೆ ಯಾರೂ ಝಡ್ ಪ್ಲಸ್ ಭದ್ರತೆ ನೀಡುವುದು ಸಾಧ್ಯವಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವರು ಟ್ವೀಟ್ ಮಾಡಿದ್ದಾರೆ.
ಅಷ್ಟೆಲ್ಲ ಅಧಿಕಾರಿಗಳು ಐದು ತಿಂಗಳ ಕಾಲ ಪ್ರಧಾನಿ ಕಚೇರಿಯ ವಿಳಾಸದ ವಿಸಿಟಿಂಗ್ ಕಾರ್ಡಿಗೆ ಮೋಸ ಹೋದರು ಎಂಬುದನ್ನು ನಂಬಲು ಸಾಧ್ಯವಿಲ್ಲ. ಮೇಲಿನವರ ಸೂಚನೆ ಇಲ್ಲದೆ ಒಬ್ಬ ಅಧಿಕಾರಿಯು ಹಿರಿಯ ಅಧಿಕಾರಿಗಳ ಬೈಠಕ್ ನಡೆಸುವುದು ಸಾಧ್ಯವೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.
ಚುನಾವಣಾ ಸ್ಥಿತಿ ಮತ್ತು ಗಡಿ ಪರಿಸ್ಥಿತಿ ಅರಿಯಲು ಅಮಿತ್ ಶಾ ಆ ವ್ಯಕ್ತಿಯನ್ನು ಕಳುಹಿಸಿರಬೇಕು ಎಂದು ಜಾಲ ತಾಣಗಳಲ್ಲಿ ಹಲವರು ಅನುಮಾನ ಪ್ರಕಟಿಸಿದ್ದಾರೆ. ಬಂಧಿಸಿದ ಮೇಲೆ ಅವರು ಏನಾದರು ಎಂದು ಯಾಕೆ ಹೊರ ಬರುತ್ತಿಲ್ಲ ಎನ್ನುವುದನ್ನೂ ಹಲವರು ಟ್ವಿಟರ್ ಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

Join Whatsapp