ಈ ಕಾರಣಕ್ಕಾಗಿಯೇ ಇಮ್ರಾನ್​ ಖಾನ್ ನನ್ನು ಕೊಲ್ಲಲು ಗುಂಡಿನ ದಾಳಿ ನಡೆಸಿದೆ: ಆರೋಪಿ ತಪ್ಪೊಪ್ಪಿಗೆ

Prasthutha|

- Advertisement -

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದು, ಇದೇ ಕಾರಣಕ್ಕೆ ನಾನು ಆತನ ಮೇಲೆ ಗುಂಡು ಹಾರಿಸಿದೆ ಎಂದು ಆರೋಪಿ ಹೇಳಿದ್ದಾನೆ.

ಪಾಕಿಸ್ತಾನದ ಪಂಜಾಬ್‌ ನ ವಜೀರಾಬಾದ್‌ ನಲ್ಲಿ ಇಮ್ರಾನ್ ಖಾನ್ ನಡೆಸುತ್ತಿದ್ದ ರ್‍ಯಾಲಿಯ ವೇಳೆ ವ್ಯಕ್ತಿಯೊಬ್ಬ ಇಮ್ರಾನ್ ಖಾನ್ ಗೆ ಗುಂಡಿನ ದಾಳಿ ನಡೆಸಿದ್ದ. ಇದರಲ್ಲಿ ಇಮ್ರಾನ್ ಮತ್ತು ಅವರ ಆಪ್ತ ಸಹಾಯಕನಿಗೆ ಗುಂಡು ತಾಕಿ ಗಾಯಗೊಂಡಿದ್ದಾರೆ.

- Advertisement -

ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಇಮ್ರಾನ್​ ರನ್ನು ಮಾತ್ರ ನಾನು ಕೊಲೆ ಮಾಡಲು ಬಯಸಿದ್ದೆ, ಬೇರೆ ಯಾರೂ ನನ್ನ ಗುರಿಯಾಗಿರಲಿಲ್ಲ ಎಂದು ತಿಳಿಸಿದ್ದಾನೆ.

Join Whatsapp