ಅಮೆರಿಕ ಅಧ್ಯಕ್ಷೀಯ ಚುನಾವಣೆ | ಇಲ್ಹಾನ್ ಒಮರ್ ಗೆ ಎರಡನೇ ಬಾರಿಗೆ ಭರ್ಜರಿ ಜಯ

Prasthutha|

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಸದೀಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇಲ್ಹಾನ್ ಒಮರ್ ಎರಡನೇ ಬಾರಿಗೆ ಮಿನ್ನೆಸೊಟದ ಮಿನ್ನೆಪೊಲಿಸ್ ಸಂಸದೆಯಾಗಿ ವಿಜೇತರಾಗಿದ್ದಾರೆ.

ಡೆಮಾಕ್ರಟಿಕ್ ಅಭ್ಯರ್ಥಿ ಇಲ್ಹಾನ್ ಒಮರ್ ತಮ್ಮ ರಿಪಬ್ಲಿಕನ್ ಪ್ರತಿಸ್ಪರ್ಧಿ ಆಫ್ರಿಕನ್ ಅಮೆರಿಕನ್ ಉದ್ಯಮಿ ಲೇಸಿ ಜಾನ್ಸನ್ ಅವರನ್ನು 64.9 ಶೇ. ಮತಗಳಿಂದ ಸೋಲಿಸಿದ್ದಾರೆ. ಜಾನ್ಸನ್ ಶೇ. 25ರಷ್ಟು ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಇಲ್ಹಾನ್ ಒಮರ್ ಅಮೆರಿಕ ಸಂಸತ್ತಿನಲ್ಲಿ ಮೊದಲ ಸೊಮಾಲಿ ಅಮೆರಿಕನ್ ಆಗಿದ್ದಾರೆ ಮತ್ತು 2018ರಲ್ಲಿ ಮೊದಲ ಬಾರಿ ಗೆದ್ದ ಇಬ್ಬರು ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.

- Advertisement -