‘ಪಂಜಾಬನ್ನು ಕೇಂದ್ರ ಸರಕಾರ ಉಸಿರುಗಟ್ಟಿಸುತ್ತಿದೆ’ ; ದೆಹಲಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಮತ್ತು ಶಾಸಕರ ಧರಣಿ

Prasthutha|

- Advertisement -

ರೈತ ಮಸೂದೆಯ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ಶಾಸಕರು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಭಟನಾ ರಾಲಿ ಪಂಜಾಬ್ ಭವನದಿಂದ ಆರಂಭವಾಗಿ ಜಂತರ್ ಮಂತರ್ ತಲುಪಿದೆ. ಕೇಂದ್ರ ಸರಕಾರವು ಪಂಜಾಬನ್ನು ಉಸಿರುಗಟ್ಟಿಸುತ್ತಿದೆ ಎಂದು ಶಾಸಕರು ಟೀಕಿಸಿದ್ದಾರೆ. ರೈತರ ಮುಷ್ಕರದ ಹೆಸರಿನಲ್ಲಿ ಪಂಜಾಬ್ ಗೆ ತೆರಳುವ ಸರಕು ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರೈತರ ಮುಷ್ಕರ ನಿಲ್ಲಿಸಿದರೆ ಸರಕು ರೈಲು ಸೇವೆಯನ್ನು ಪುನರಾರಂಭಿಸಲಾಗುವುದೆಂದು ರೈಲ್ವೇ ಸಚಿವಾಲಯ ಹೇಳಿದೆ.

ಕಲ್ಲಿದ್ದಲು ರಾಜ್ಯವನ್ನು ತಲುಪದ ಕಾರಣ ಉಷ್ಣ ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ರಾಜ್ಯವು ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಚಳಿಗಾಲದ ಬೆಳೆಗಳಿಗೆ ಗೊಬ್ಬರವೂ ಬರುತ್ತಿಲ್ಲ. ದೊಡ್ಡ ಮೊತ್ತವನ್ನು ನೀಡಿ ಟ್ರಕ್ ಮೂಲಕ ಯೂರಿಯಾವನ್ನು ತರಲಾಗುತ್ತದೆ. ಚಳಿಗಾಲದ ಕೃಷಿಗೆ ಪಂಜಾಬ್ ಗೆ 14.50 ಲಕ್ಷ ಟನ್ ಯೂರಿಯಾ ಬೇಕಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ಕೇವಲ 75,000ಟನ್ ಗಳಿವೆ. ಆಲೂಗಡ್ಡೆ ಮತ್ತು ಗೋಧಿ ಕೃಷಿಗೆ ಹೆಚ್ಚು ತೊಂದರೆಯಾಗಿದೆ.

- Advertisement -

ಕೇಂದ್ರವು ಅಂಗೀಕರಿಸಿದ ಹೊಸ ರೈತ ಮಸೂದೆಯ ವಿರುದ್ಧ ಪಂಜಾಬ್ ಸರಕಾರ ಕಾನೂನು ಜಾರಿಗೆ ತಂದಿತ್ತು. ಇದಕ್ಕೆ ಅನುಮೋದನೆ ಪಡೆಯಲು ರಾಷ್ಟ್ರಪತಿಯನ್ನು ಭೇಟಿ ಮಾಡಲು ಅನುಮತಿ ಕೋರಿದರೂ ತಿರಸ್ಕರಿಸಲಾಗಿತ್ತು. ಮೊದಲು ಧರಣಿಯನ್ನು ರಾಜ್ ಘಾಟ್ ನಲ್ಲಿ ಮಾಡುವುದೆಂದು ನಿರ್ಧರಿಸಲಾಗಿತ್ತು. ಭದ್ರತಾ ಕಾರಣಗಳಿಂದಾಗಿ ಧರಣಿಯನ್ನು ಜಂತರ್ ಮಂತರ್ ಗೆ ಸ್ಥಳಾಂತರಿಸಲಾಯಿತು

Join Whatsapp