ನನಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದ್ದರೆ, ಬದುಕುತ್ತಿದ್ದೆ ಎಂದ್ದಿದ್ದ ನಟ ರಾಹುಲ್ ಸಾವು !

Prasthutha|

- Advertisement -

ನನಗೂ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದರೆ ನಾನು ಬದುಕುಳಿಯುತ್ತಿದ್ದೆ ಎಂದು ಸಾಯುವ ಮುಂಚೆ ಟ್ವೀಟ್ ಮಾಡಿದ್ದ ನಟ ಹಾಗೂ ಯೂ ಟ್ಯೂಬರ್ ರಾಹುಲ್ ವೋಹ್ರಾ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಕೋವಿಡ್ ಸೋಂಕಿನಿಂದ  ತೀವ್ರವಾಗಿ ಬಳಲುತ್ತಿದ್ದ ನಟ ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸಾವಿಗೂ ಒಂದು ದಿನದ ಮೊದಲು ಅಂದರೆ ಮೇ 8 ರಂದು  ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ , ನನಗೂ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದರೆ ನಾನೂ ಬದುಕುಳಿಯಬಹುದಿತ್ತು ಎಂದು ಬರೆದಿದ್ದರು.  ಪ್ರಧಾನಿ ಮೋದಿಯ ಹೆಸರನ್ನೂ ಅವರು ಉಲ್ಲೇಖಿಸಿದ್ದು ಗಮನಾರ್ಹ.

- Advertisement -

ನಾನು ಬೇಗನೆ ಮತ್ತೆ ಹುಟ್ಟಿ ಬರುತ್ತೇನೆ. ಒಳ್ಳೆ ಕೆಲಸ ಮಾಡುತ್ತೇನೆ ಈಗ ಧೈರ್ಯ ಕಳೆದುಕೊಂಡ್ಡಿದ್ದೇನೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.

ಬದುಕು ಬಯಕೆ ಹೊಂದಿದ್ದ ರಾಹುಲ್ ಕೊನೆಗೂ ಕೋವಿಡ್ ವಿರುದ್ದದ ಹೋರಾಟದಲ್ಲಿ ಸೋಲು ಒಪ್ಪಿಕೊಂಡು ಕೊನೆಯುಸಿರೆಳೆದಿದ್ದಾರೆ. ಉದಯೋನ್ಮುಖ ನಟನನ್ನು ಕೋವಿಡ್ ಬಲಿ ಪಡೆದುಕೊಂಡಿದೆ. ಸಾಯುವ ಮುಂಚೆ  ರಾಹುಲ್ ಮಾಡಿದ್ದ ಫೇಸ್ ಬುಕ್ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದ್ದು ಅವರ ಸಾವಿಗೆ ಆಪ್ತರು ಬಂಧುಗಳು ಸಂತಾಪ ಸೂಚಿಸಿದ್ದಾರೆ.

Join Whatsapp