ಹುಬ್ಬಳ್ಳಿಯ ವಿದ್ಯಾರ್ಥಿನಿ ಕೊಲೆ ಖಂಡನೀಯ, ಕೋಮು ರಾಜಕೀಯವೂ ಅಸಹ್ಯ: ಕರ್ನಾಟಕ ಮುಸ್ಲಿಂ ಯುನಿಟಿ

Prasthutha|

ಬೆಂಗಳೂರು: ಹುಬ್ಬಳ್ಳಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಫಯಾಝ್ ಎಂಬ ಯುವಕ ನೇಹಾ ಎಂಬ ಯುವತಿಯನ್ನು ತಾನು ಓದುತ್ತಿರುವ ಕಾಲೇಜಿನ ಆವರಣದಲ್ಲಿಯೇ ಇರಿದು ಕೊಂದಿದ್ದಾನೆ. ಇಬ್ಬರೂ ಪರಿಚಿತರಿದ್ದರೂ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂಬುದೇ ಕೊಲೆಗೆ ಕಾರಣ ಎನ್ನಲಾಗಿದೆ. ಅ ಹುಡುಗನ ಬಂಧನವಾಗಿ ಕಾನೂನುಪ್ರಕ್ರಿಯೆ ನಡೆಯುತ್ತಿದೆ. ಈ ಕರುಳು ಕಲಕುವ ಘಟನೆ ಖಂಡನೀಯ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ಪ್ರಧಾನ‌ ಕಾರ್ಯದರ್ಸಿ ಖಾಸಿಂ ಸಾಬ್ ಹೇಳಿದ್ದಾರೆ.

- Advertisement -

ಈ ಹೆಣ್ಣುಮಗಳ ಬದುಕಿನ ಈ ರೀತಿಯ ಅಂತ್ಯಕ್ಕೆ ಕಾರಣವಾದ ವ್ಯಕ್ತಿ ಮೇಲೆ ಸೂಕ್ತ ಹಾಗು ಶೀಘ್ರ ಕಾನೂನು ರೀತಿಯ ಕ್ರಮಜರುಗಿಸಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೊಲೆ ಆರೊಪಿಯನ್ನು ಒಂದು ಘಂಟೆಯೊಳಗೆ ಬಂಧಿಸಿದ ಹುಬ್ಬಳ್ಳಿ ಪೊಲೀಸರ ಕಾರ್ಯವ‌ನ್ನು ಅವರು ಶ್ಲಾಘಿಸಿದ್ದಾರೆ.

- Advertisement -

ಇತ್ತೀಚೆಗೆ ಪುತ್ತೂರಿನ ಜಯಶ್ರೀ ಎಂಬ ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಉಮೇಶ್ ಎಂಬ ಯುವಕ ಈ ಹುಡುಗಿಯನ್ನು ಹತ್ಯೆ ಮಾಡಿದ್ದ. ಇಂತಹ ನೂರಾರು ಪ್ರೀತಿ ಪ್ರೇಮಗಳ ನೆಪಗಳ ಸುತ್ತ ಹತ್ಯೆಗಳು, ಆಸಿಡ್ ದಾಳಿಗಳು ನಮ್ಮ ನಡುವೆ ನಡೆಯುತ್ತಲೇ ಇವೆ. ಈ ಕೃತ್ಯಗಳು ಅಮಾನವೀಯ ಹಾಗು ಶಿಕ್ಷಾರ್ಹ. ಇಂತಹ ಘಟನೆಗಳಿಗೆ ಕೋಮು ಧರ್ಮಗಳ ಬಣ್ಣ ಬಳಿಯುವ ನೀಚ ರಾಜಕೀಯವೂ ಅಷ್ಟೇ ಅಸಹ್ಯ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ಆರೋಪಿಸುತ್ತಾ, ಕೆಲವು ರಾಜಕೀಯ ಮುಖಂಡರು ಈ ಘಟನೆಯನ್ನು ಧರ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಪ್ರಕಟನೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಆರೋಪಿಯ ಜಾತಿ, ಧರ್ಮ, ವರ್ಗ, ಹೆಸರನ್ನು ನೋಡಿ ಅಪರಾಧವನ್ನು ಆತನ ಇಡೀ ಸಮುದಾಯದ ತಲೆಗೆ ಕಟ್ಟಿ ಸಮಾಜದಲ್ಲಿ ಹಿಂದು ಮುಸ್ಲಿಮರ ಮಧ್ಯೆ ಭಯ ಮತ್ತು ಸಂಶಯವನ್ನುಂಟು ಮಾಡಿ ಈ ಚುನಾವಣಾ ಸಂಧರ್ಭದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿರುವ ರಾಜಕಾರಣಿಗಳ ನೀಚನಡೆ ಖಂಡನೀಯ ಎಂದಿದ್ದಾರೆ.

ನೇಹಾ ಹಂತಕ ಫಯಾಝ್ ಬೆಳಗಾವಿ ಜಿಲ್ಲೆ ಮುನವಳ್ಳಿಯವನಾಗಿದ್ದು, ಅಲ್ಲಿ ಹಿಂದೂ-ಮುಸ್ಲಿಮರು ಜಂಟಿಯಾಗಿ ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಸಂಕೇಶ್ವರ – ಸವದತ್ತಿ ಹೆದ್ದಾರಿಯಲ್ಲಿ ಮುಸ್ಲಿಮ್ ಸಮುದಾಯದ ನೂರಾರು ಮಂದಿ ನೇಹಾ ಫೊಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಈ ಅಮಾನವಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಅಮಾನವೀಯ ಹತ್ಯೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸುತ್ತದೆ. ಅಳ್ನಾವರ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ಹಾಗೂ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಕಮಿಷನರ್ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಎಂದು ಮಾಹಿತಿ‌‌ ನೀಡಿದ್ದಾರೆ.

ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯಾರೇ ಕಾನೂನು ಕೈಗೆತ್ತಿಕೊಂಡರೂ ಖಂಡಿಸುತ್ತೇವೆ. ಪೊಲೀಸರ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆ ಸ್ವಾಗತಾರ್ಹ. ಅಪರಾದಿಗೆ ಸೂಕ್ತ ಹಾಗು ಶೀಘ್ರ ಕಾನೂನು ಶಿಕ್ಷೆ ಯಾಗಬೇಕು ವೆಂಬುದು ನಮ್ಮ ಬೇಡಿಕೆ. ನೇಹಾ ಸಾವಿನ ದುಃಖ ಭರಿಸುವ ಶಕ್ತಿ ಅ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ಪ್ರಾರ್ಥನೆಯಾಗಿದೆ ಎಂದು‌‌ ಖಾಸಿಂ ಸಾಬ್ ಹೇಳಿದ್ದಾರೆ.

Join Whatsapp