ಹಾರ್ದಿಕ್ ಪಾಂಡ್ಯ ರಾಕೆಟ್ ತ್ರೋ: ಬಿಸಿಸಿಐಗೆ 30 ಲಕ್ಷ ನಷ್ಟ !

Prasthutha|

ಮುಂಬೈ: ಐಪಿಎಲ್ 15ನೇ ಆವೃತ್ತಿಯ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಾರ ರಾಕೆಟ್ ತ್ರೋ ಬಿಸಿಸಿಐಗೆ ಬರೋಬ್ಬರಿ 30 ಲಕ್ಷ ನಷ್ಟವಾಗಿಸಿದೆ. ಪಂದ್ಯದ ವೇಳೆ ಹಾರ್ದಿಕ್ ರನೌಟ್ ನಡೆಸಲು ಎಸೆದಿದ್ದ ತ್ರೋ ಗೆ ಎಲ್ ಇಡಿ ವಿಕೆಟ್ ಮುರಿದು ಬಿದ್ದಿದೆ. ತುಂಡಾಗಿ ಬಿದ್ದ LED ವಿಕೆಟ್ ಬೆಲೆ 30 ಲಕ್ಷ ರೂ.ಯದ್ದಾಗಿತ್ತು.

- Advertisement -

ಕಳೆದ ಗುರುವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದ್ದ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ಪಂದ್ಯದಲ್ಲಿ, ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ರನೌಟ್ ನಡೆಸಲು ಹಾರ್ದಿಕ್ ಪಾಂಡ್ಯ ಎಸೆದ ರಾಕೆಟ್ ತ್ರೋ ಗೆ ಸ್ಟಂಪ್ ಮುರಿದು ಬಿದ್ದಿದೆ.

ಐಪಿಎಲ್ ಗೆ ಬಳಸಲಾಗುವ ಒಂದು LED ಸ್ಟಂಪ್ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ ಆಗಿದ್ದು, LED ಸ್ಟಂಪ್ ಗಳು ಬ್ಯಾಟರಿ ಚಾಲಿತವಾಗಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಸೆನ್ಸಾರ್ ಅಳವಡಿಸಲಾಗಿದ್ದು, ಸ್ಟಂಪ್ ಗೆ ಬಾಲ್ ತಗುಲಿದರೆ ಮಾತ್ರ ಅದು ಬೆಳಗುತ್ತದೆ. ಭಾರತದಲ್ಲಿ ಮೊದಲ ಬಾರಿಗೆ ಈ LED ಸ್ಟಂಪ್​ಗಳನ್ನು ಐಪಿಎಲ್​ ನಲ್ಲಿ ಬಳಸಲಾಗಿತ್ತು. ಆ ಬಳಿಕ ಬಿಗ್​ ಬ್ಯಾಷ್ ಲೀಗ್​ನಲ್ಲಿ ಇದನ್ನು ಬಳಸಲಾಗಿತ್ತು.. 

Join Whatsapp