ಮಂದಿರ ನಿರ್ಮಿಸಲು ಜಮೀನು ನೀಡದ ಕುಟುಂಬಕ್ಕೆ ಚಿತ್ರಹಿಂಸೆ!

Prasthutha|


►ಗಡ್ಡ ಬೋಳಿಸಿ ಗೋಮೂತ್ರ ಕುಡಿಯುವಂತೆ ಬಲವಂತಪಡಿಸಿದ ಪಂಚಾಯತ್

- Advertisement -

ಭೋಪಾಲ್: ಮಂದಿರ ನಿರ್ಮಾಣಕ್ಕೆ ಜಮೀನು ನೀಡಲಿಲ್ಲ ಎಂದು ಆರೋಪಿಸಿ ಕುಟುಂಬವೊಂದರ ವಿರುದ್ಧ ಚಿತ್ರಹಿಂಸೆ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಗುನಾ ಜಿಲ್ಲೆಯ ಸ್ಥಳೀಯ ಪಂಚಾಯತ್ ಮಂದಿರ ನಿರ್ಮಿಸಲು ತಮ್ಮ ಇಡೀ ಭೂಮಿಯನ್ನು ನೀಡದಿದ್ದಕ್ಕಾಗಿ ಕುಟುಂಬಕ್ಕೆ ಚಿತ್ರಹಿಂಸೆ ನೀಡಿ ಸಮುದಾಯದಿಂದಲೇ ಹೊರಹಾಕಲಾಗಿದೆ ಎಂದು ವರದಿಯಾಗಿದೆ.

- Advertisement -

ಗುನಾದ ಶಿವಾಜಿ ನಗರ ಪ್ರದೇಶದ ನಿವಾಸಿ ಹೀರಾ ಲಾಲ್ ಘೋಶಿ ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಗಡ್ಡ ಬೋಳಿಸಿ, ಪಾದರಕ್ಷೆಯನ್ನು ತಲೆಯಲ್ಲಿ ಹೊತ್ತುಕೊಂಡು ಕುಟುಂಬದ ಸದಸ್ಯರಿಗೆ ಗೋಮೂತ್ರ ನೀಡುವಂತೆ ಪಂಚಾಯಿತಿ ಬಲವಂತಪಡಿಸುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

“ಮಂದಿರ ಕಟ್ಟಲು ನಾವು ಭೂಮಿಯ ಒಂದು ಭಾಗವನ್ನು ದಾನ ಮಾಡಿದ್ದೇವೆ. ಆದರೆ ಪಂಚಾಯತ್ ಸದಸ್ಯರು ಇಡೀ ಜಮೀನು ನೀಡಬೇಕೆಂದಾಗ ನಾವು ನಿರಾಕರಿಸಿದೆವು. ಇದರಿಂದಾಗಿ ನಮ್ಮ ಮನೆಗೆ ಯಾರೂ ಬರಬಾರದೆಂಬ ಎಂಬ ಷರತ್ತಿನೊಂದಿಗೆ ನಮ್ಮ ಕುಟುಂಬವನ್ನು ಸಮುದಾಯದಿಂದ ಹೊರಹಾಕಲಾಗಿದೆ ಎಂದು ಘೋಶಿ ಆರೋಪಿಸಿದ್ದಾರೆ.

ಘಟನೆಯ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Join Whatsapp