ಗ್ರಾ.ಪಂ. ಉಪಚುನಾವಣೆ: ಅನಂತಾಡಿಯಲ್ಲಿ ಕಾಂಗ್ರೆಸ್, ಆರ್ಯಾಪು -ನೆಟ್ಲಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು

Prasthutha|

ಬಂಟ್ವಾಳ: ಫೆ.25ರಂದು ನಡೆದ ಗ್ರಾಪಂ ಉಪಚುನಾವಣೆಯಲ್ಲಿ ಆರ್ಯಾಪು ಹಾಗೂ ನೆಟ್ಲ ಮುಡ್ನೂರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಅನಂತಾಡಿ ಕ್ಷೇತ್ರದಲ್ಲಿ ಕೂದಳೆಲೆಯ ಅಂತರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ

- Advertisement -

ಅನಂತಾಡಿ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಶಶಿಕಲಾ 254 ಮತಗಳನ್ನು ಗಳಿಸಿ ಬಿಜೆಪಿ ಬೆಂಬಲಿತ ಗೀತಾ 242 ಮತಗಳನ್ನು ಗಳಿಸಿದ್ದಾರೆ. ನೆಟ್ಲಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಸುಜಾತಾ 353 ಮತ ಗಳಿಸಿ ಗೆಲುವು ಸಾಧಿಸಿದರೆ ಕಾಂಗ್ರೆಸ್ ಹರಿಣಾಕ್ಷಿ ಸೋಲು ಕಂಡರು. ಪುತ್ತೂರು ತಾಲೂಕಿನ ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವರವರು 171 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವರವರು 498 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೊಟ್ಲರವರು 327 ಮತಗಳನಷ್ಟೆ ಪಡೆಯಲು ಶಕ್ತರಾದರು.

Join Whatsapp