ಮೌಲಾನಾ ಆಜಾದ್ ಫೆಲೋಶಿಪ್ ರದ್ದುಗೊಳಿಸಲು‌ ನಿರ್ಧರಿಸಿದ ಕೇಂದ್ರ ಸರಕಾರ

Prasthutha|

ಹೊಸದಿಲ್ಲಿ: ಯುಪಿಎ ಆಡಳಿತಾವಧಿಯಲ್ಲಿ ಸಾಚಾರ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಭಾಗವಾಗಿ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾದ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ (MANF) ಅನ್ನು 2022-23 ರಿಂದ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

- Advertisement -

ಗುರುವಾರ ಲೋಕಸಭೆಯಲ್ಲಿ ಈ ವಿಚಾರ ತಿಳಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಸರ್ಕಾರ ಜಾರಿಗೊಳಿಸುವ ವಿವಿಧ ಫೆಲೋಶಿಪ್‌ಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಸಿಗುತ್ತಿದೆ. ಆದ್ದರಿಂದ MANF ಯೋಜನೆಯಡಿಯಲ್ಲಿ ಬರುವ ಫೆಲೋಶಿಪ್ ಗಳು 2022-23 ನೇ ಶೈಕ್ಷಣಿಕ ವರ್ಷದಿಂದ ಮುಂದುವರಿಯುವುದಿಲ್ಲ. MANF ಹೊರತುಪಡಿಸಿ ಇತರ ಎಲ್ಲಾ ಯೋಜನೆಗಳು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳ ಅಭ್ಯರ್ಥಿಗಳಿಗೆ ಮುಕ್ತವಾಗಿವೆ ಎಂದು ಹೇಳಿದರು.


ಯೋಜನೆಯನ್ನು ಜಾರಿಗೊಳಿಸಿದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಒದಗಿಸಿದ ಮಾಹಿತಿಯ ಪ್ರಕಾರ, 2014-15 ಮತ್ತು 2021-22 ರ ನಡುವೆ ಸುಮಾರು 6,722 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ₹ 738.85 ಕೋಟಿ ಮೊತ್ತದ ಫೆಲೋಶಿಪ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

Join Whatsapp