ಮುಡಿಪು: ಗೋಡೆ ಕೊರೆದು ಚಿನ್ನಾಭರಣ ಮಳಿಗೆಯಿಂದ ಕಳ್ಳತನ

Prasthutha|

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ಚಿನ್ನದ ಅಂಗಡಿಯ ಗೋಡೆಯನ್ನು ಕೊರೆದು ಲಕ್ಷಾಂತರ ಬೆಲೆ ಬಾಳುವ ಚಿನ್ನ ಕಳ್ಳತನ ನಡೆಸಿರುವ ಘಟನೆ ನಡೆದಿದೆ.

- Advertisement -

ಕುರ್ನಾಡು ನಿವಾಸಿ ಇಬ್ರಾಹಿಂ ಎಂಬವರ ಮಾಲೀಕತ್ವದ ಮುಡಿಪುವಿನಲ್ಲಿರುವ ಗೋಲ್ಡ್ ಕಿಂಗ್ ಜ್ಯುವೆಲ್ಲರಿಯ ಎಡಭಾಗದ ಗೋಡೆಯನ್ನು ಕೊರೆದು ಒಳ ನುಗ್ಗಿದ ಕಳ್ಳರು ಭಾರೀ ಮೊತ್ತದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ.

Join Whatsapp