January 2, 2021

ಜನರಲ್ ಸುಲೈಮಾನ್ ಹತ್ಯೆ ಅಪರಾಧಿಗಳಿಗೆ ಶಿಕ್ಷೆಯಾಗುವ ತನಕ ವಿರಮಿಸಲಾರೆವು: ಇರಾನ್ ವಿದೇಶಾಂಗ ಸಚಿವಾಲಯ

ಉನ್ನತ ಇರಾನ್ ಸೇನಾ ಕಮಾಂಡರ್ ಜನರಲ್ ಕಾಸಿಮ್ ಸುಲೈಮಾನಿ ವಿರುದ್ಧದ ‘ಹೇಡಿತನದ ಭಯೋತ್ಪಾದನಾ ಕೃತ್ಯ’ವನ್ನು ಎಸಗಿರುವುದಕ್ಕಾಗಿ ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತೊಮ್ಮೆ ಅಮೆರಿಕಾವನ್ನು ದೂಷಿಸಿದೆ. ಹತ್ಯೆಯ ಅಪರಾಧಿಗಳನ್ನು ಶಿಕ್ಷಿಸಲಾಗುವುದು ಎಂದು ಅದು ಪ್ರಮಾಣ ಮಾಡಿದೆ.  

ಇರಾಕ್ ರಾಜಧಾನಿ ಬಗ್ದಾದ್ ಸಮೀಪ ಜನರಲ್ ಸುಲೈಮಾನ್ ಹತ್ಯೆಯ ಒಂದು ವರ್ಷಾಚರಣೆಯ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಸಚಿವಾಲಯ ವಾಶಿಂಗ್ಟನ್ ನಡೆಸಿದ ಈ ಭಯೋತ್ಪಾದನಾ ಕೃತ್ಯವು ಅಂತಾರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಸನದು ಮತ್ತು ಇರಾಕ್ ನ ಸಾರ್ವಭೌಮತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಹೇಳಿದೆ.

ಇದಕ್ಕೆ ಜವಾಬ್ದಾರರಾದವನ್ನು ಕಾನೂನಿನಡಿ ತರುವ ತನಕ ಇರಾನ್ ವಿರಮಿಸದು ಎಂದು ಬರೆದಿದೆ.

ಇರಾನ್ ನ ಇಸ್ಲಾಮಿಕ್ ರೆವಲ್ಯೂಶನ್ ಕಾರ್ಪ್ಸ್ ಗಾರ್ಡ್ಸ್ ನ ದುದ್ಸ್ ಪಡೆಯ ಮಾಜಿ ಕಮಾಂಡರ್ ಆಗಿದ್ದ ಜನರಲ್ ಸುಲೈಮಾನಿ ಯವರನ್ನು ಅಮೆರಿಕಾ ಹತ್ಯೆ ನಡೆಸಿ ಜನವರಿ 3ಕ್ಕೆ ಮೊದಲ ವರ್ಷಾಚರಣೆಯಾಗಿದೆ. ಮಧ್ಯಪ್ರಾಚ್ಯದ ಅನುಪಮ ವರ್ಚಸ್ಸು ಹೊಂದಿದ ಸಮರ್ಥ ಭಯೋತ್ಪಾದಕ ನಿಗ್ರಹ ಕಮಾಂಡರ್ ಎಂಬುದಾಗಿ ಅವರನ್ನು ಶ್ಲಾಘಿಸಲಾಗುತ್ತಿತ್ತು.

ಟಾಪ್ ಸುದ್ದಿಗಳು

ವಿಶೇಷ ವರದಿ