ಉತ್ತರ ಪ್ರದೇಶ | ಭಾರೀ ಮಳೆಗೆ ನೀರಿನ ಮಟ್ಟ ಹೆಚ್ಚಳ; ಗಂಗಾ ನದಿಯಲ್ಲಿ ಮತ್ತೆ ತೇಲಿ ಬಂದ ಹೆಣಗಳು!

Prasthutha|

ಪ್ರಯಾಗ್‌ ರಾಜ್‌ : ಮುಂಗಾರು ಮಳೆ ಹೆಚ್ಚುತ್ತಿದ್ದಂತೆ, ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿದ್ದು, ಈ ವೇಳೆ ಇನ್ನಷ್ಟು ಶವಗಳು ನೀರಿನಲ್ಲಿ ತೇಲಿ ಬಂದ ಬಗ್ಗೆ ವರದಿಗಳಾಗಿವೆ.

- Advertisement -

ನದಿ ಮರಳಿನಲ್ಲಿ ಹೂತಿಡಲಾಗಿದ್ದ ಶವಗಳು ನೀರಿನ ಮಟ್ಟ ಏರುತ್ತಿದ್ದಂತೆ ಮೇಲೆ ಬಂದಿದ್ದು, ನೀರಿನಲ್ಲಿ ತೇಲುತ್ತಿರುವ ಈ ಶವಗಳನ್ನು ದಫನ ಮಾಡಲು ಸಿಬ್ಬಂದಿ ಅವಿರತ ಶ್ರಮ ಪಡುತ್ತಿದ್ದಾರೆ. ಸ್ಥಳಿಯ ಪತ್ರಕರ್ತರು ಈ ಹೆಣಗಳ ಫೋಟೊ ತೆಗೆಯುವುದನ್ನು, ಶವ ದಫನ ಕಾರ್ಯದಲ್ಲಿ ಅಡಚಣೆ ಎನ್ನಲಾಗುತ್ತಿದೆ.

ನದಿ ತಟದಲ್ಲಿ ಸಿಲುಕಿದ್ದ ಶವವೊಂದನ್ನು ಮೇಲೆ ತೆಗೆಯುವಾಗ, ಶವದ ಮೇಲಿದ್ದ ಕೇಸರಿ ಶವಹೊದಿಕೆ ತೆಗೆದಾಗ ಕೈಯಲ್ಲಿ ಬಿಳಿ ಸರ್ಜಿಕಲ್‌ ಕೈಗವಸು ಇರುವುದು ಪತ್ತೆಯಾಗಿದೆ.

- Advertisement -

ಕಳೆದ ೨೪ ಗಂಟೆಗಳಲ್ಲಿ ೪೦ ಹೆಣಗಳ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಪ್ರಯಾಗ್‌ ರಾಜ್‌ ಮುನ್ಸಿಪಲ್‌ ಕಾರ್ಪೊರೇಶನ್‌ ವಲಯ ಅಧಿಕಾರಿ ನೀರಜ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಸತ್ತವರ ಬಾಯಿಯಲ್ಲಿ ಆಕ್ಸಿಜನ್‌ ಟ್ಯೂಬ್‌ ಪತ್ತೆಯಾಗಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ̤ ಸತ್ತವರ ಕುಟುಂಬಸ್ಥರು ಶವವನ್ನು ಎಸೆದು ಹೋಗಿರಬಹುದು, ಬಹುಶಃ ಅವರು ಹೆದರಿರಬಹುದು ಎಂದು ಅವರು ತಿಳಿಸಿದ್ದಾರೆ.

ಕೋವಿಡ್‌ ಸೋಂಕಿತ ಮೃತದೇಹಗಳನ್ನು ನದಿಗೆಸೆದಿರುವ ವೀಡಿಯೊಗಳು ಈ ಹಿಂದೆ ಉತ್ತರ ಪ್ರದೇಶದಲ್ಲಿ ಕಂಡುಬಂದಿದ್ದವು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಿಎಂ ಆದಿತ್ಯನಾಥ್‌ ಸರಕಾರ ಕೋವಿಡ್‌ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬ ಆರೋಪಗಳಿವೆ.

Join Whatsapp