ಬೆಂಗಳೂರು : ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಭಗತ್ ಸಿಂಗ್ ಅವರು ಜೀವವನ್ನು ಒತ್ತೆ ಇಟ್ಟರು, ವಿಮೋಚನೆಯ ನಾಯಕರಾದ ಅಂಬೇಡ್ಕರ್ ಮತ್ತು ಪೆರಿಯಾರ್ ಹೋರಾಡಿದರು, ಬೋಸ್ ಹಿಂದೂ – ಮುಸ್ಲಿಂ ಏಕತೆಯನ್ನು ಉಳಿಸಿಕೊಂಡರು ಮತ್ತು ಸಮಾಜವಾದಿಗಳಾದ ಲೋಹಿಯಾ ಅವರು ಕೂಡ ಹೋರಾಡಿದರು. ಸಂಘ ಪರಿವಾರವು ಯಾವುದರಲ್ಲೂ ಭಾಗವಹಿಸಲಿಲ್ಲ, ಮತ್ತು ಕಾಂಗ್ರೆಸ್ ಎಲ್ಲಾ ಲಾಭಗಳನ್ನು ದೋಚಿಕೊಂಡಿತು. ಇಲ್ಲ ಸಿದ್ದರಾಮಯ್ಯನವರೇ, ಸ್ವಾತಂತ್ರ್ಯವು ಕೇವಲ ಕಾಂಗ್ರೆಸ್ಸಿನಿಂದ ಬಂದಿದ್ದಲ್ಲ ಎಂದು ನಟ ಚೇತನ್ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಈ ಹಿಂದೆಯೂ ಚೇತನ್ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್ ಪಕ್ಷದ ಸದಸ್ಯರಾದ ಕೆ.ಬಿ.ಹೆಡ್ಗೆವಾರ್ ಅವರು 1925ರಲ್ಲಿ ಆರ್ ಎಸ್ ಎಸ್ ಅನ್ನು ಸ್ಥಾಪಿಸಿದರು. ಕಾಂಗ್ರೆಸ್ ನ ಮತ್ತೊಬ್ಬ ಸದಸ್ಯ ಬಾಲ ಗಂಗಾಧರ ತಿಲಕ್ ಅವರು ಹೆಡ್ಗೆವಾರ್ ಅವರನ್ನು ಪ್ರಭಾವಿಸಿದ್ದರು. ಆರ್ ಎಸ್ ಎಸ್ (ಸಂಘಪರಿವಾರ) ಯಾವತ್ತಿನಿಂದಲೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ಎರಡಕ್ಕೂ ಲಾಭವಾಗುತ್ತದೆ. ಸಮಾನತೆ ಕಾಂಗ್ರೆಸ್ ಮತ್ತು ಸಂಘ, ಎರಡನ್ನೂ ಸೋಲಿಸಬೇಕು ಎಂದು ಟ್ವೀಟ್ ಮೂಲಕ ಕರೆ ನೀಡಿದ್ದರು.