ಫ್ರಾನ್ಸ್ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪ್ರತಿಪಾದನೆ ನಾಚಿಕೆಗೆಟ್ಟ ಬೂಟಾಟಿಕೆ: ಆಮ್ನೆಸ್ಟಿ ಇಂಟರ್ ನ್ಯಾಶನಲ್

Prasthutha: November 16, 2020

ಅಂಕಾರ: ತಾನು ಭಾವಿಸಿಕೊಂಡಿರುವಂತೆ ಫ್ರಾನ್ಸ್ ಸರಕಾರ ಮಾತನಾಡುವ ಸ್ವಾತಂತ್ರ್ಯದ ಹರಿಕಾರನೇನು ಅಲ್ಲ ಎಂದು ಆಮ್ನೆಸ್ಟಿ ಇಂಟರ್ ನ್ಯಾಶನಲ್ ಹೇಳಿದ್ದು, ಸರಕಾರದ ಇತ್ತೀಚಿನ ಹೇಳಿಕೆಯನ್ನು ನಾಚಿಕೆಗೆಟ್ಟ ಬೂಟಾಟಿಕೆ ಎಂದು ಅದು ಬಣ್ಣಿಸಿದೆ.

ಎಲ್ಲರಿಗೂ ಅನ್ವಯಿಸದ ಅಭಿವ್ಯಕ್ತಿ ಸ್ವಾತಂತ್ರ್ಯ ಏನೂ ಅಲ್ಲ ಎಂದು ಮಾನವ ಹಕ್ಕು ಗುಂಪಿನ ಸಂಶೋಧಕ ಮಾರ್ಕೊ ಪಿರೊಲಿನಿ ಹೇಳಿದ್ದಾರೆ.

ಅಕ್ಟೋಬರ್ ಮಧ್ಯ ಭಾಗದಲ್ಲಿ ನಡೆದ ಫ್ರಾನ್ಸ್ ಶಿಕ್ಷಕ ಸ್ಯಾಮುಯಲ್ ಪ್ಯಾಟಿ ಹತ್ಯೆಗೆ ಸಂಬಂಧಿಸಿದಂತೆ ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಮತ್ತು ಅವರ ಸರಕಾರ ಫ್ರೆಂಚ್ ಮುಸ್ಲಿಮರ ವಿರುದ್ಧ ಸುಳ್ಳಿನ ಅಭಿಯಾನವನ್ನು ತೀರ್ವಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

“ಭಯೋತ್ಪಾದನೆ ಕ್ಷಮೆಯಾಚನೆ’’ ಆರೋಪದಲ್ಲಿ ನಾಲ್ವರು 10ರ ಹರೆಯದ ಮಕ್ಕಳನ್ನು ಫ್ರೆಂಚ್ ಪೊಲೀಸರು ಗಂಟೆಗಳ ಕಾಲ ಪ್ರಶ್ನಿಸುವಂತಹ ಘಟನೆಗಳನ್ನು ಉಲ್ಲೇಖಿಸುತ್ತಾ “ತಮ್ಮದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅವರು ದಾಳಿ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು.

ಶಾಂತಿಯುತ ಪ್ರತಿಭಟನೆಯೊಂದರ ವೇಳೆ ಮ್ಯಾಕ್ರನ್ ರ ಪ್ರತಿಕೃತಿಯನ್ನು ದಹಿಸಿರುವುದಕ್ಕಾಗಿ ಫ್ರಾನ್ಸ್ ನ್ಯಾಯಾಲವು ಇಬ್ಬರು ವ್ಯಕ್ತಿಗಳ ವಿರುದ್ಧ ನಿಂದನೆಯ ತೀರ್ಪು ನೀಡಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಕಾನೂನು ಜಾರಿ ಅಧಿಕಾರಿಗಳ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವುದನ್ನು ಅಪರಾಧೀಕರಣಗೊಳಿಸುವ ಮಸೂದೆಯನ್ನೂ ಅವರು ಉಲ್ಲೇಖಿಸಿದ್ದಾರೆ.

ಗಣತಂತ್ರವಾದಿ ಸಾರ್ವತ್ರೀಕರಣದ ಹೆಸರಿನಲ್ಲಿ ಮುಸ್ಲಿಮರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮದ ಕಡೆಗೆ ಗಮನಹರಿಸಲಾಗುವುದಿಲ್ಲ. ಜಾತ್ಯತೀತತೆಯ ಹೆಸರಿನಲ್ಲಿ ಶಾಲೆಗಳಲ್ಲಿ ಮತ್ತು ಇತರ ಸಾರ್ವಜನಿಕ ವಲಯ ಉದ್ಯೋಗಗಳಲ್ಲಿ ಫ್ರಾನ್ಸ್ ನ ಮುಸ್ಲಿಮರು ಧಾರ್ಮಿಕ ಸಂಕೇತಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ಒತ್ತಿಹೇಳಿದರು.

“ಇತರ ವಲಯಗಳಲ್ಲಿ ಫ್ರಾನ್ಸ್ ನ ಅಭಿವ್ಯಕ್ತಿ ಸ್ವಾತಂತ್ರ್ಯದ ದಾಖಲೆಯು ಮಂಕಾಗಿದೆ. ‘ಸಾರ್ವಜನಿಕ ಅಧಿಕಾರಿಗಳ’ ನಿಂದನೆಗಾಗಿ ಸಾವಿರಾರು ಜನರನ್ನು ಎಲ್ಲಾ ವರ್ಷ ಶಿಕ್ಷಿಸಲಾಗುತ್ತಿದೆ” ಎಂದು ಅವರು ಹೇಳಿದರು.

“ಫ್ರಾನ್ಸ್ ನಲ್ಲಿ ಇಸ್ರೇಲಿ ಉತ್ಪಾದನೆಗಳನ್ನು ಬಹಿಷ್ಕರಿಸಲು ಅಭಿಯಾನ ನಡೆಸಿದ್ದಕ್ಕಾಗಿ 11 ಮಾನವ ಹಕ್ಕು ಹೋರಾಟಗಾರರನ್ನು ಶಿಕ್ಷಿಸಿರುವುದನ್ನು ಹೋರಾಟಗಾರರ ಮಾತನಾಡುವ ಸ್ವಾತಂತ್ರ್ಯದ ಉಲ್ಲಂಘನೆ ಎಂಬುದಾಗಿ ಈ ವರ್ಷದ ಜೂನ್ ನಲ್ಲಿ  ಯುರೋಪ್ ಮಾನವಹಕ್ಕುಗಳ ನ್ಯಾಯಾಲಯ ತೀರ್ಪು ನೀಡಿತ್ತು” ಎಂದು ಅವರು ಹೇಳಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ