ಮುಲ್ಕಿ: ಕಾರ್ನಾಡಿನಲ್ಲಿ ಎಸ್.ಡಿ.ಪಿ.ಐಯಿಂದ ಮಾಹಿತಿ ಮತ್ತು ಸೇವಾ ಕೆಂದ್ರ

Prasthutha|

ಮುಲ್ಕಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಲ್ಕಿ ವಲಯದ ವತಿಯಿಂದ ಮುಲ್ಕಿಯ ಕಾರ್ನಾಡಿನ ನಾಲೂರು ಕಾಂಪ್ಲೆಕ್ಸ್, ಕಾರ್ನಾಡುನಲ್ಲಿ ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಕಿಲ್ಪಾಡಿಯ ಬೆಥನಿ ಪಿ.ಯು ಕಾಲೇಜು ಪ್ರಾಂಶುಪಾಲೆ ವಂ|ಭಗಿನಿ ಎಸ್.ಆರ್ ಮಾರಿಲೋ ಜಿಎಸ್ ನ.15ರಂದು ಸೇವಾ ಕೇಂದ್ರವನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಮುಲ್ಕಿ ಮೂಡುಬಿದಿರೆ  ಕ್ಷೇತ್ರ ಅಧ್ಯಕ್ಷರಾದ  ಆಸೀಫ್ ಕೋಟೆಬಾಗಿಲು ವಹಿಸಿದ್ದರು. ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ದಾರಿಮಿ ದುಆ ಆಶೀರ್ವಚನ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಅಶೋಕ್ ಕುಮಾರ್ ಶೆಟ್ಟಿ, ಲಿಯಾಕತ್ ಆಲಿ, ಶರೀಫ್ ಕೊಲ್ನಾಡು ಮುಂತಾದವರು ಉಪಸ್ಥಿತರಿದ್ದರು.

- Advertisement -