ಬಸ್ – ಟ್ರಕ್ ನಡುವೆ ಭೀಕರ ಅಪಘಾತ; 6 ಮಂದಿ ಸಾವು, 21 ಮಂದಿಗೆ ಗಾಯ

Prasthutha|

ಲಕ್ನೋ: ಬಸ್ – ಟ್ರಕ್ ನಡುವಿನ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 21 ಜನರು ಗಾಯಗೊಂಡಿರುವ ಘಟನೆ ಫಿರೋಜಾಬಾದ್’ನಲ್ಲಿ ಬುಧವಾರ ನಡೆದಿದೆ.

- Advertisement -


ಲುಧಿಯಾನ ಮತ್ತು ರಾಯ್ ಬರೇಲಿಯಯಿಂದ 50 ಪ್ರಯಾಣಿಕರನ್ನು ಹೊತ್ತುಕೊಂಡು ಬರುತ್ತಿದ್ದ ಬಸ್ಸಿಗೆ ಆಗ್ರಾ-ಲಕ್ನೋ ದಾರಿಯಲ್ಲಿ ಟ್ರಕ್ ಡಿಕ್ಕಿ ಹೊಡೆದಿದೆ.


ಚಾಲಕ ಬಸ್ ಚಲಾಯಿಸುವಾಗ ತೂಕಡಿಸುತ್ತಿದ್ದು, ಹಿಂದಿನಿಂದ ಬಂದ ಟ್ರಕ್ ಬಸ್ ಗೆ ಢಿಕ್ಕಿಯಾಗಿದ್ದರಿಂದ ಬಸ್ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

- Advertisement -


ಘಟನಾ ಸ್ಥಳದಿಂದ ಬಸ್ಸನ್ನು ತೆರವುಗೊಳಿಸಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp