ಬರೋಬ್ಬರಿ 14 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ ಪತ್ತೆ; ಆರೋಪಿಯ ಬಂಧನ

Prasthutha|

ಗುವಾಹಟಿ: ಗುಪ್ತಚರ ಮಾಹಿತಿಯನ್ನಾಧಾರಿಸಿ ಕಾರ್ಯಾಚರಣೆ ನಡೆಸಿದ ಗುವಾಹಟಿ ನಗರ ಪೊಲೀಸರು ಬೃಹತ್ ಮೊತ್ತದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

- Advertisement -


ನಗರ ಪೊಲೀಸ್ ಆಯುಕ್ತರಾದ ಪಾರ್ಥ ಸಾರಥಿ ಮಹಾಂತ ಮತ್ತು ಕಲ್ಯಾಣ್ ಪಾಠಕ್ ನೇತೃತ್ವದ ತಂಡವು ಅಂಬ್ಯುಲೆನ್ಸ್ ಚಾಲಕ ಮಿರಾಜೌಲ್ ಎಂಬಾತನನ್ನು ಬಂಧಿಸಿ 50,000 ನಿಷೇಧಿತ ಮಾತ್ರೆ, 200 ಗ್ರಾಂ ಹೆರಾಯಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ.


ಮಣಿಪುರದಿಂದ ಬರುತ್ತಿದ್ದ ಆಂಬ್ಯುಲೆನ್ಸನ್ನು ತನಿಖೆ ನಡೆಸಿದಾಗ ಡ್ರಗ್ಸ್ ಇರುವುದಾಗಿ ತಿಳಿದು ಬಂದಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 14.10 ಕೋಟಿ ರೂ. ಆಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಾಂತ ಹೇಳಿದ್ದಾರೆ.

Join Whatsapp